of your HTML document.

Saughat-e-Modi: ಮುಸ್ಲಿಂರಿಗೆ ಮೋದಿ ಕಿಟ್: ಸಿದ್ರಾಮುಲ್ಲ ಖಾನ್ ಹೋದ್ರು, ಮೊಹಿ( ಮೋದಿ) ದ್ದೀನ್ ಖಾನ್ ಬಂದ್ರು! ಚುಡಾಯಿಸುತ್ತಿರುವ ಕಾಂಗ್ರೆಸ್ಸಿಗರು!

Mangalore: ಸೌಗತ್-ಎ-ಮೋದಿ ಹೆಸರಲ್ಲಿ ಬಿಜೆಪಿಯ(BJP) ವರಿಷ್ಠ ನಾಯಕರೇ ಮುಸ್ಲಿಂರಿಗೆ(Muslim) ಈದ್ ಕಿಟ್(Ed Kit) ಕೊಡುತ್ತಿದ್ದಾರೆ. ಇದು ತುಷ್ಠೀಕರಣವಲ್ಲವೆ.? ಇದು ಓಲೈಕೆ ರಾಜಕಾರಣವಲ್ಲವೆ? ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಬಿಜೆಪಿಯನ್ನು, ಪ್ರಶ್ನಿಸಿದ್ದಾರೆ.

ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಚರ್ಚೆ ಶುರುವಾಗಿದೆ. ಸಿದ್ರಾಮುಲ್ಲ ಖಾನ್ ಹೋದ್ರು, ಮೊಹಿದ್ದೀನ್ ಖಾನ್ ಬಂದ್ರು ಅಂತ ದೊಡ್ಡದಾಗಿ ವಾಟ್ಸ್ ಆ್ಯಪ್ ಗಳಲ್ಲಿ ಬಿಜೆಪಿಯ ಈ ನಡೆಗೆ ಕಾಂಗ್ರೆಸ್ಸಿಗರು(Congress) ಕಿಚಾಯಿಸುತ್ತಿದ್ದಾರೆ. ಸಿದ್ದರಾಮಯ್ಯ ಮುಸ್ಲಿಮರ ಟೋಪಿ ಧರಿಸಿದ್ರೆ, ಮುಸ್ಲಿಮರಿಗೆ ಗಿಫ್ಟ್ ನೀಡಿದ್ರೆ, ಬಡ್ಜೆಟ್ ನಲ್ಲಿ ಹೆಚ್ಚುವರಿ ಮೀಸಲಾತಿ ಕೊಟ್ರೆ ಆಗ ಸಿದ್ದುರವರನ್ನು, ಇದು ಮುಸ್ಲಿಂ ತುಷ್ಟೀಕರಣ ಎಂದು ಕರೆದು, ಸಿದ್ರಾಮುಲ್ಲಾ ಖಾನ್ ಎನ್ನಲಾಗುತ್ತಿತ್ತು. ಈಗ ಸ್ವತಃ ಮೋದಿಯೇ ಮುಸ್ಲಿಂರಿಗೆ ಗಿಫ್ಟ್ ನೀಡಿದ್ದಾರೆ. ಈಗ ಮೊಹಿದ್ದೀನ್ ಖಾನ್ ಅಂತಾ ಮೋದೀನ ಕರೀಬೇಕಾ? ಎಂದು ಬಿಜೆಪಿಗರನ್ನು ಲೇವಡಿ ಮಾಡಲಾಗುತ್ತಿದೆ. ಈ ಬಗ್ಗೆ ಮಂಗಳೂರಿನ ಕಾಂಗ್ರೆಸ್ಸಿಗ ಸುನಿಲ್ ಬಜಿಲಕೇರಿ ಈ ಸಂಬಂಧಿತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.

ಏನಂದ್ರು ಸಚಿವ ಗುಂಡೂ ರಾವ್?
ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಮೋದಿ ಹೆಸರಲ್ಲಿ ಈದ್ ಕಿಟ್ ನೀಡಿದ್ದಾರೆ. ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಂರಿಗೆ ಈದ್ ಕಿಟ್ ಕೊಡಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಇದೇ ಕಾರ್ಯಕ್ರಮವನ್ನು ಕಾಂಗ್ರೆಸ್‌ ಮಾಡಿದ್ದರೆ ಪರಿಸ್ಥಿತಿ ಹೇಗಿರುತಿತ್ತು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ. ಈದ್ ಕಿಟ್ ಕೊಟ್ಟರೆ ಬಿಜೆಪಿಯ ಪುಡಿ ನಾಯಕರು ಇಷ್ಟೊತ್ತಿಗಾಗಲೇ ಬೀದಿಗಿಳಿಯುತ್ತಿದ್ದರು. ಮುಸ್ಲಿಮರ ತುಷ್ಠೀಕರಣ ಮಾಡುತ್ತಿದೆ, ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಬೊಂಬಡ ಬಜಾಯಿಸುತ್ತಿದ್ದರು. ಆದರೆ ಈಗ ಸೌಗತ್-ಎ-ಮೋದಿ ಹೆಸರಲ್ಲಿ ಬಿಜೆಪಿಯ ವರಿಷ್ಠ ನಾಯಕರೇ ಮುಸ್ಲಿಂರಿಗೆ ಈದ್ ಕಿಟ್ ಕೊಡುತ್ತಿದ್ದಾರೆ. ಇದು ಓಲೈಕೆ ರಾಜಕಾರಣವಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ.

Comments are closed.