Mangaluru Jail: ಮಂಗಳೂರು ಜೈಲಿಗೆ ಜಾಮರ್ ಅಳವಡಿಕೆ; 1 ಕಿ.ಮೀ. ಸುತ್ತಮುತ್ತ ನೆಟ್‌ವರ್ಕ್ ಸಮಸ್ಯೆ!

Mangalore Jail: ಮಂಗಳೂರು ಜೈಲಿಗೆ ಅಳವಡಿಸಿರುವ ಜಾಮರ್ ಇದೀಗ ಸುತ್ತಮುತ್ತಲಿನ ನಿವಾಸಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ಇದರಿಂದ ಜನರಿಂದ ಆಕ್ರೋಶ ವ್ಯಕ್ತವಾಗಿದೆ.
ಮಂಗಳೂರು ಜೈಲು ಕೈದಿಗಳ ಕಳ್ಳಾಟಗಳಿಂದ ಈ ಪರಿಸ್ಥಿತಿ ಉಂಟಾಗಿದೆ. ಗಾಂಜಾ ಪೊಟ್ಟಣ, ಮೊಬೈಲ್ ಸೇರಿ ಮಾದಕ ವಸ್ತುಗಳು ಪತ್ತೆಯಾಗಿತ್ತು. ಈ ಬೆನ್ನಲ್ಲೇ ಮೊಬೈಲ್ ಜಾಮರ್ ಅಳವಡಿಸಲಾಗಿದೆ. ಪರಿಣಾಮ ಜೈಲಿನ ಸುಮಾರು ಒಂದು ಕಿ.ಮೀ.ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಜೈಲಿನ ಕೂಗಳತೆ ದೂರದಲ್ಲಿ ನೂರಾರು ಮನೆ, ಫ್ಲ್ಯಾಟ್, ಅಂಗಡಿ, ಹೋಟೆಲ್‌ಗಳಿದ್ದು ಬಹುತೇಕರಿಗೆ ಮೊಬೈಲ್ ಜಾಮರ್ ಅಳವಡಿಕೆಯಿಂದ ನೆಟವರ್ಕ್ ಸಮಸ್ಯೆ ಕಾಡಿದೆ.
Comments are closed.