MRI scanner: ದೇಶೀಯವಾಗಿ ತನ್ನ ಮೊದಲ MRI ಯಂತ್ರ ಅಭಿವೃದ್ಧಿಪಡಿಸಿದ ಭಾರತ

MRI scanner: ಭಾರತವು(India) ತನ್ನ ಮೊದಲ ದೇಶೀಯ MRI ಯಂತ್ರ ಅಭಿವೃದ್ಧಿಪಡಿಸಿದ್ದು, ಇದನ್ನು 2025ರ ಅಕ್ಟೋಬರ್ ವೇಳೆಗೆ ದೆಹಲಿಯ ಏಮ್ಸ್ ನಲ್ಲಿ(Delhi AIIMS) ಪ್ರಯೋಗಗಳಿಗಾಗಿ ಸ್ಥಾಪಿಸಲಾಗುವುದು. ಚಿಕಿತ್ಸಾ ವೆಚ್ಚದಲ್ಲಿ ಕಡಿತ ಮತ್ತು ವೈದ್ಯಕೀಯ ಸಾಧನಗಳ ಆಮದು ಮೇಳಿನ ಅವಲಂಬನೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಪ್ರಸ್ತುತ 80-85% MRI ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. AIIMS ಪ್ರಕಾರ, ದೇಶೀಯ MRI ಯಂತ್ರವು ವೈದ್ಯಕೀಯ ತಂತ್ರಜ್ಞಾನದಲ್ಲಿ ಭಾರತವನ್ನು ಹೆಚ್ಚು ಸ್ವಾವಲಂಬಿಯನ್ನಾಗಿ ಮಾಡಲು ಸಹಾಯ ಮಾಡಲಿದೆ. ಇದರಿಂದಾಗಿ ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
ಮುಂಬೈನಲ್ಲಿರುವ ಪ್ರಧಾನ ಆಸ್ಪತ್ರೆ ಮತ್ತು ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮತ್ತು ಸಂಶೋಧನಾ ಸಂಸ್ಥೆ (SAMEER) ನಡುವೆ 1.5 ಟೆಸ್ಲಾ MRI ಸ್ಕ್ಯಾನರ್ ಸ್ಥಾಪನೆಗಾಗಿ ತಿಳುವಳಿಕೆ ಪತ್ರಕ್ಕೆ (MoU) ಸಹಿ ಹಾಕಲಾಗಿದೆ – ಇದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿದೆ.
AIIMS-ದೆಹಲಿ ನಿರ್ದೇಶಕ ಡಾ. ಎಂ. ಶ್ರೀನಿವಾಸ್ ಅವರು ಭಾರತದಲ್ಲಿನ ನಿರ್ಣಾಯಕ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಆರೈಕೆ, ಐಸಿಯುಗಳು, ರೊಬೊಟಿಕ್ಸ್, MRI ಗಳಲ್ಲಿನ ಹೆಚ್ಚಿನ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
“ಈ ಸ್ಥಳೀಯ MRI ಯಂತ್ರದ ಅಭಿವೃದ್ಧಿಯು ವಿದೇಶಿ ಆಮದು ಮಾಡಿದ ಸಾಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಆತ್ಮನಿರ್ಭರ ಭಾರತ್ ಆಗುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಅವರು ಹೇಳಿದರು.
Comments are closed.