Ranya Rao: ಅಕ್ರಮವಾಗಿ ಚಿನ್ನ ಸಾಗಾಣೆ ಪ್ರಕರಣ: ಹವಾಲಾ ಮೂಲಕ ಚಿನ್ನ ಖರೀದಿ-ನಟಿ ತಪ್ಪೊಪ್ಪಿಗೆ!

Share the Article

Ranya Rao: ಅಕ್ರಮವಾಗಿ ಚಿನ್ನ ಸಾಗಾಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾರಾವ್‌, “ಚಿನ್ನದ ಖರೀದಿಗೆ ಹವಾಲ ಮೂಲಕ ವ್ಯವಹಾರ ಮಾಡಿದ್ದಳುʼ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಕುರಿತು ಕಂದಾಯ ಗುಪ್ತಚರ ನಿರ್ದೇಶನಾಯಲಯ ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಮಂಗಳವಾರ ನಟಿ ರನ್ಯಾರಾವ್‌ ಜಾಮಿನು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ನಗರದ 64 ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಮಾರ್ಚ್‌ 27 ಕ್ಕೆ ತೀರ್ಪು ಕಾಯ್ದಿರಿಸಿದೆ.

ನಟಿ ರನ್ಯಾ ರಾವ್‌ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಿರುವುದು ಗಂಭೀರ ಸ್ವರೂಪದ ಜಾಮೀನು ರಹಿತ ಅಪರಾಧ, ಚಿನ್ನ ಖರೀದಿಗಾಗಿ ಹವಾಲ ಮೂಲಕ ಹಣ ರವಾಣೆ ಮಾಡಿದ್ದಾಳೆ. ಇದನ್ನು ಸ್ವತಃ ರನ್ಯಾ ರಾವ್‌ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಡಿಆರ್‌ಐ ಪರ ವಕೀಲ ಮಧುರಾವ್‌ ಅವರು ಪ್ರತಿಪಾದಿಸಿದರು.

Comments are closed.