Murder: ಮದುವೆಯಾದ 15 ದಿನಗಳಲ್ಲೇ ವರನ ಕೊಲೆ: ಪ್ರಿಯಕರನ ಜತೆ ಸೇರಿ ಕೊಲೆ ಮಾಡಿಸಿದ ಪತ್ನಿ

Murder: ಮದುವೆಯಾದ(Marriage) 2 ವಾರದಲ್ಲೇ ಮಹಿಳೆಯೊಬ್ಬಳು(Lady) ತನ್ನ ಪ್ರಿಯಕರನ(Lover) ಜತೆ ಸೇರಿ ಪತಿಯನ್ನು ಹತ್ಯೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ(UP) ಔರೈಯಾದಲ್ಲಿ ನಡೆದಿದೆ. ಆರೋಪಿಗಳಾದ ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ 4 ವರ್ಷಗಳಿಂದ ಪ್ರೀತಿಸುತ್ತಿದ್ದು, ಇವರ ಪ್ರೀತಿಯನ್ನು ಒಪ್ಪದ ಪೋಷಕರು ಮಾರ್ಚ್ 5ರಂದು ದಿಲೀಪ್ ಎಂಬಾತನ ಜತೆ ಪ್ರಗತಿ ಮದುವೆ ಮಾಡಿಸಿದ್ದರು. ಮದುವೆಯ ನಂತರ ಭೇಟಿಯಾಗಲು ಸಾಧ್ಯವಾಗದ ಕಾರಣ ಅವರಿಬ್ಬರು ಸೇರಿ ದಿಲೀಪ್ ಕೊಲೆಗೆ ರಾಮಾಜಿ ಚೌಧರಿ ಎಂಬಾತನಿಗೆ ₹2 ಲಕ್ಷ ನೀಡಿದ್ದರು.
ಪತ್ನಿ, ಪ್ರಿಯಕರನೊಂದಿಗೆ ಸೇರಿ ಪತ್ನಿಗೆ ಗುಂಡು ಹೊಡೆದು ಹೊಲದಲ್ಲಿ ಬಿಸಾಕಿದ್ದರು ಎನ್ನಲಾಗಿದೆ. ಅಲ್ಲಿ ಗಾಯಗೊಂಡು ಬಿದ್ದಿದ್ದ ದಿಲೀಪ್‌ನನ್ನು ಯಾರೋ ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದರು. ಆ ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಚಿಕಿತ್ಸೆಗೆ ಸ್ಪಂದಿಸದ
ಕಾರಣ ಕೊನೆಗೆ ಔರೈಯಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ದಿಲೀಪ್ ಅಲ್ಲಿ ಕೊನೆಯುಸಿರೆಳೆದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಿಲೀಪ್‌ನನ್ನು ರಾಮಾಜಿ ಮತ್ತು ಇನ್ನಿತರರು, ಬೈಕ್‌ನಲ್ಲಿ ಹೊಲಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ನಂತರ ಆತನಿಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ ೨ ಪಿಸ್ತೂಲ್‌ಗಳು, ನಾಲ್ಕು ಲೈವ್ ಕಾರ್ಟ್ರಿಡ್ಜ್‌ಗಳು, ಒಂದು ಬೈಕ್, ಎರಡು ಮೊಬೈಲ್ ಫೋನ್‌ಗಳು, ಒಂದು ಪರ್ಸ್, ಆಧಾರ್ ಕಾರ್ಡ್ ಮತ್ತು 3,000 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
Comments are closed.