Encroachment: ಪವಿತ್ರ ಕಾವೇರಿ ನದಿಗೆ ಸೇರುವ ಬಳ್ಳಾರಿಮಾಡು ತೋಡು ಒತ್ತುವರಿ ತೆರವು : ಸರ್ಕಾರದಿಂದ ದಿನಾಂಕ ನಿಗದಿ

Encroachment: ವಿವಾದಿತ ವಿರಾಜಪೇಟೆಯ(Viraj Pete) ಬಳ್ಳಾರಿಮಾಡು ಗ್ರಾಮದ ತೋಡು(Canal) ಒತ್ತುವರಿ ತೆರವು ಮಾಡಲು ಸರಕಾರದಿಂದ(Govt) ದಿನಾಂಕ ನಿಗದಿಪಡಿಸಲಾಗಿದೆ. ಉಪವಿಭಾಗದಿಕಾರಿಗಳ ಆದೇಶದಂತೆ ಬಳ್ಳಾರಿಮಾಡು ಗ್ರಾಮದ ತೋಡು ಒತ್ತುವರಿ ತೆರವು ಕಾರ್ಯ ನಾಳೆ 27/03/25 ರಂದು 11 ಗಂಟೆಗೆ ನಡೆಯಲಿದೆ.
ಪವಿತ್ರ ಕಾವೇರಿ ನದಿಗೆ(Cauvery river) ಸೇರ್ಪಡೆಗೊಳ್ಳುವ ಈ ತೋಡನ್ನು sy no 11 ರ 0.08.50 ಎಕರೆ ಜಾಗವನ್ನು ಸ್ಥಳೀಯ ಗ್ರಾಮಸ್ಥರೊಬ್ಬರೂ ಒತ್ತುವರಿ ಮಾಡಿದ್ದೂ ಈ ವಿಚಾರವಾಗಿ ಗ್ರಾಮಸ್ಥರು ದೂರು ನೀಡಿದ ಹಿನ್ನಲೆ 16/1/24 ರಂದು ಉಪವಿಭಾಧಿಕಾರಿಗಳು ನೀಡಿದ ಆದೇಶದಂತೆ ಸರ್ವೇ ಕಾರ್ಯ ನಡೆದು ಒತ್ತುವರಿ ಸಾಬೀತು ಆಗಿತ್ತು. ಇದನ್ನು ಅಂದಿನ ಮಾನ್ಯ ತಹಸೀಲ್ದಾರ್ ಎಚ್. ಎನ್ ರಾಮಚಂದ್ರ ರವರು ಸ್ಥಳ ಪರಿಶೀಲನೆ ಮಾಡಿ ಉಪವಿಭಾಗಧಿಕಾರಿಗಳಿಗೆ ಕಳುಹಿಸಿದರು ಅದರಂತೆ ತೋಡು ಒತ್ತುವರಿ ತೆರವು ಮಾಡಲು ಆದೇಶ ವಾಗಿದೆ.
ನಮ್ಮ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಹಲವೆಡೆ ನೀರಿನ ಅಭಾವವಿದೆ ಕಾವೇರಿ ನದಿಯ ತವರಿನಲ್ಲಿ ನೀರಿನ ಹರಿಯುವಿಕೆ ಪ್ರಮಾಣ ಕಡಿಮೆ ಯಾಗುತಿದೆ. ತೋಡುಗಳು, ಕಾಲುವೆಗಳು, ಹೊಳೆಗಳು, ಉಪನದಿಗಳು ಮತ್ತು ಇನ್ನಿತರ ಜಲ ಮೂಲಗಳ ಸಂರಕ್ಷಣೆಯನ್ನು ಮಾಡುವ ದೃಷ್ಟಿಯಿಂದ ಇದೀಗ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ.
Comments are closed.