of your HTML document.

Rakshak Bullet: ರಜತ್‌, ವಿನಯ್‌ ನಂತರ ಇನ್ನೋರ್ವ ಬಿಗ್‌ಬಾಸ್‌ ಸ್ಪರ್ಧಿ ವಿವಾದ; ದೂರು ದಾಖಲಿಸಲು ಮುಂದಾದ ಹಿಂದೂ ಸಂಘಟನೆ!

Rakshak Bullet: ಬಿಗ್‌ಬಾಸ್‌ ಸ್ಪರ್ಧಿಗಳಾದ ರಜತ್‌ ಮತ್ತು ವಿನಯ್‌ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೋರ್ವ ಬಿಗ್‌ಬಾಸ್‌ ಸ್ಪರ್ಧಿ ರಕ್ಷಕ್‌ ಬುಲೆಟ್‌ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ದೂರು ದಾಖಲಿಸಲು ಮುಂದಾಗಿದೆ.

ರಿಯಾಲಿಟಿ ಶೋವೊಂದರಲ್ಲಿ ರಕ್ಷಕ್‌ ಅವರು ತಮ್ಮ ಡೈಲಾಗ್‌ ಮೂಲಕ ತಾಯಿ ಚಾಮುಂಡೇಶ್ವರಿಗೆ ಅಪಮಾನ ಮಾಡಿರುವ ಕುರಿತು ಆರೋಪವಿದೆ.

ರಿಯಾಲಿಟಿ ಸ್ಟೇಜ್‌ ಶೋನಲ್ಲಿ ರಕ್ಷಕ್‌ ಬುಲೆಟ್‌ ಅವರು ತಮ್ಮ ಸಹನಟಿಗೆ ನಿಮ್ಮ ನೋಡಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು, ಪ್ಯಾಂಟು ಶರ್ಟು ಹಾಕ್ಕೊಂಡು ಸ್ವಿಜರ್‌ಲ್ಯಾಂಡ್‌ನಲ್ಲಿ ಟ್ರಿಪ್‌ ಹೊಡಿತಿದ್ದಾರೆ ಅನ್ನಿಸ್ತಿದೆ ಎನ್ನುವ ಡೈಲಾಗ್‌ ಹೊಡೆದಿದ್ದು, ಈ ಮೂಲಕ ಡೈಲಾಗ್‌ ಹೊಡೆಯುವ ಭರದಲ್ಲಿ ರಕ್ಷಕ್‌ ಬುಲೆಟ್‌ ಯಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದು ಹಿಂದೂ ಹೋರಾಟಗಾರರ ಕೋಪಕ್ಕೆ ಕಾರಣವಾಗಿದೆ. ಈ ಕಾರಣದಿಂದ ಹಿಂದೂ ಮುಖಂಡರು ರಕ್ಷಕ್‌ ಬುಲೆಟ್‌ ವಿರುದ್ಧ ಇಂದು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದು, ಬಹಿರಂಗ ಕ್ಷಮೆಯಾಚಿಸಲು ಆಗ್ರಹ ಮಾಡಿದ್ದಾರೆ. ಹಾಗೆನೇ ಚಾಮುಂಡಿ ಬೆಟ್ಟಕ್ಕೆ ತೆರಳಿ ತಪ್ಪು ಕಾಣಿಕೆ ಸಲ್ಲಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

Comments are closed.