Udupi: ಉಡುಪಿ: ಕಟಪಾಡಿಯಲ್ಲಿ ಎಪ್ರೀಲ್ 13ರಂದು ಮೊದಲ ಆವೃತ್ತಿಯ ತುಳು ಸಮಾವೇಶ “ತುಳುನಾಡ್ ಕಾನ್ಕ್ಲೇವ್ – 2025”

Udupi: ತುಳು ಭಾಷೆಯ ಉಳಿವು-ಅಳಿವು, ಮುಂದಿನ ಪೀಳಿಗೆಗೆ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯ ಪಸರಬೇಕೆಂಬ ಉದ್ದೇಶದಿಂದ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್(ರಿ.) ಆಯೋಜಿಸುತ್ತಿರುವ “ತುಳುನಾಡ್ ಕಾನ್ಕ್ಲೇವ್ -2025″ರ ಮೊದಲ ಸಮಾವೇಶ ಕಟಪಾಡಿ ವಿಶ್ವನಾಥ ಕ್ಷೇತ್ರದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಎಪ್ರೀಲ್ 13ರಂದು ಆದಿತ್ಯವಾರ ನಡೆಯುವುದು.
ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿರುವ ಈ ಸಮಾವೇಶದಲ್ಲಿ ತುಳುನಾಡಿನ ಕಾಸರಗೋಡಿನಿಂದ ಉಡುಪಿಯವರೆಗೆನ ಅನೇಕ ವಿದ್ವಾಂಸರು ತುಳು ಭಾಷೆ, ಸಂಸ್ಕೃತಿ, ಜನಪದ, ಹೋರಾಟ, ಸಾಹಿತ್ಯ ಮತ್ತು ಲಿಪಿಯ ಬಗೆಗೆ ತಮ್ಮ ವಿಚಾರವನ್ನು ಮಂಡಿಸಲಿರುವರು. ತುಳುವಿನ ಸಾಹಿತ್ಯಕ್ಕೆ ಸತತ ಕೊಡುಗೆ ನೀಡುತ್ತಾ ಕಳೆದ ವರ್ಷ 6 ತುಳು ಪುಸ್ತಕಗಳನ್ನು ತುಳು ಲಿಪಿಯಲ್ಲಿ ಬಿಡುಗಡೆ ಮಾಡಿರುವ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಸಂಸ್ಥೆ, ಈ ಬಾರಿ ಸಮಾವೇಶದಲ್ಲಿ 5 ಹೊಸ ತುಳು ಪುಸ್ತಕಗಳನ್ನು ಬಿಡುಗಡೆ ಮಾಡಲಿದೆ.
ಶ್ರೀ ಫ್ರಹ್ಲಾದ್ ಪಿ. ತಂತ್ರಿಯವರು ಅಭಿವೃದ್ದಿ ಪಡಿಸಿರುವ ಯುನಿಕೋಡ್ ಸಹ್ಯ ತುಳುವಿನ ಆಸ್ಕಿ ಫಾಂಟ್ “ಮಲ್ಲಿಗೆ” ಹಾಗೆಯೇ ತುಳು ಯುನಿಕೋಡ್ ಕೀಬೋರ್ಡ್ ಲೇಔಟ್ ಕೂಡಾ ಈ ಸಮಾವೇಶದಲ್ಲಿ ಬಿಡುಗಡೆಗೊಳ್ಳಲಿದೆ. ತುಳು ಪುಸ್ತಕಮೇಳ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆ ನಡೆಯಲಿದೆ.
Comments are closed.