Sunita Williams: ಅನ್ಯಗ್ರಹ ಜೀವಿಗಳ ಬಗ್ಗೆ ಸುನಿತ ವಿಲಿಯಮ್ಸ್ ಅಚ್ಚರಿ ಸ್ಟೇಟ್ಮೆಂಟ್ – ಬಾಹ್ಯಾಕಾಶದಲ್ಲಿ ಕಂಡದ್ದೇನು?

Sunita Williams : ಬರೋಬ್ಬರಿ ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿದ್ದು ಇದೀಗ ಸುನಿತ ವಿಲಿಯಮ್ಸ್(Sunita Williams) ಮರಳಿ ಭೂಮಿಗೆ ಇಳಿದಿದ್ದಾರೆ. ಇದೀಗ ಕೆಲವು ವರ್ಷಗಳ ಹಿಂದೆ ಏಲಿಯನ್ಸ್ ಗಳ ಕುರಿತು ಅವರು ನೀಡಿದ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು, 2013 ರಲ್ಲಿ ಕೊಲ್ಕತ್ತಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು ‘ಬಾಹ್ಯಾಕಾಶದ ಕತ್ತಲೆ ವಲಯಗಳನ್ನು ನೋಡಿದಾಗ, ನಮಗೆ ತಿಳಿಯದ ಏನೋ ಇದೆ ಎಂದು ಅನಿಸುತ್ತದೆ. ಕೋಟಿಗಟ್ಟಲೆ ನಕ್ಷತ್ರಗಳಿರುವಾಗ, ಅಲ್ಲಿ ಜೀವ ಇಲ್ಲವೆಂದು ಭಾವಿಸುವುದು ಕಷ್ಟ. ಬೇರೆ ಸೌರವ್ಯೂಹಗಳಿಗೆ ಪ್ರಯಾಣಿಸಲು ಎಷ್ಟು ಸಮಯ ಬೇಕೋ ತಿಳಿದಿಲ್ಲ. ಆದರೆ ಅದು ನನ್ನ ಜೀವಿತಾವಧಿಯಲ್ಲಿ ನಡೆಯುವುದಿಲ್ಲ” ಎಂದು ಅವರು ಹೇಳಿದ್ದರು.
ಸುನೀತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಬ್ಯಾರಿ ‘ಬುಚ್’ ವಿಲ್ಮೋರ್ ಒಂಬತ್ತು ತಿಂಗಳ ಬಾಹ್ಯಾಕಾಶ ಯಾನದ ನಂತರ ಭೂಮಿಗೆ ಮರಳಿದ್ದಾರೆ. ಹೀಗಾಗಿ ಸುನೀತ ವಿಲಿಯಮ್ಸ್ ಕುರಿತು ಸಾಕಷ್ಟು ಕುತೂಹಲಕಾರಿ ವಿಚಾರಗಳು ಇದೀಗ ಮುನ್ನಲೆಗೆ ಬರುತ್ತಿವೆ. ಅವರ ಬಾಹ್ಯಾಕಾಶದ ಜೀವನ, ವಿಜ್ಞಾನ ಲೋಕಕ್ಕೆ ಕಾಲಿಟ್ಟ ಸಂದರ್ಭಗಳು ಎಲ್ಲವನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ. ಅಂತೆಯೇ ಇದೀಗ ಏಲಿಯನ್ಸ್ ಕುರಿತು ಅವರು ಹಿಂದೆ ನೀಡಿದ್ದ ಹೇಳಿಕೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Comments are closed.