Waste dumping yard: ಕಸ ವಿಲೇವಾರಿ ಘಟಕದ ತ್ಯಾಜ್ಯ ಸಮಸ್ಯೆಗೆ ಶಾಸಕರಿಂದ ಸ್ಪಂದನೆ: 79 ಲಕ್ಷ ಅನುದಾನ ಬಿಡುಗಡೆ

Waste dumping yard: ಹಲವಾರು ವರ್ಷಗಳಿಂದ ವಿರಾಜಪೇಟೆ ಪುರಸಭೆ(Corporation) ಕಸ ವಿಲೇವಾರಿ ಘಟಕದಲ್ಲಿ ತ್ಯಾಜ್ಯಗಳ(Waste) ಸಮಸ್ಯೆಗೆ ಕೊನೆಗೂ ಮುಕ್ತಿ ದೊರಕಿದೆ. ತ್ಯಾಜ್ಯಗಳಿಂದ ಬರುತ್ತಿದ್ದ ವಾಸನೆ ಹಾಗೂ ನೊಣಗಳ ಹಾವಳಿಯಿಂದ ಗ್ರಾಮಸ್ಥರು ಹಲವು ಬಾರಿ ಪುರಸಭೆಗೆ ಮನವಿ ಮಾಡಿದರು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅನುದಾನದ(Fund) ಕೊರತೆ ಪುರಸಭೆಗೆ ಕಾಡುತ್ತಿತ್ತು. ಈ ನಿಟ್ಟಿನಲ್ಲಿ ಗ್ರಾಮಸ್ಥರ ದೂರಿಗೆ ಸೂಕ್ತವಾಗಿ ಸ್ಪಂದಿಸಿದ ಶಾಸಕ ಎ.ಎಸ್ ಪೊನ್ನಣ್ಣ(MLA A S Ponnanna) 79 ಲಕ್ಷ ಅನುದಾನವನ್ನು ಪುರಸಭೆಯ ಕಸ ವಿಲೇವಾರಿ ಘಟಕಕ್ಕೆ ಆಧುನಿಕ ಯಂತ್ರಗಳನ್ನು ಅಳವಡಿಸಲು ನೀಡಿದ ಪರಿಣಾಮವಾಗಿ ಇದೀಗ ಕಾಮಗಾರಿ ಪ್ರಾರಂಭವಾಗಿದೆ. ಕಸ ವಿಲೇವಾರಿ ಘಟಕಕ್ಕೆ ಅಳವಡಿಸುತ್ತಿರುಯುವ ಅಧುನಿಕ ಯಂತ್ರ ಗಳನ್ನು ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ದೇಚಮ್ಮ ಕಾಳಪ್ಪ ಪರಿಶೀಲಿಸಿದರು.
ಕಳೆದ ಹಲವಾರು ವರ್ಷಗಳಿಂದ ತ್ಯಾಜ್ಯಗಳ ಸಮಸ್ಯೆ ಕಾಡುತ್ತಿತ್ತು. ಇದೀಗ ಶಾಸಕರ ವಿಶೇಷ ಅನುದಾನದಿಂದ ಸಮಸ್ಯೆಗೊಂದು ಮುಕ್ತಿ ದೊರೆಯುತ್ತದೆ ಎಂಬ ಆಶಾಭಾವನೆ ನಮ್ಮಲ್ಲಿದೆ ಎಂದು ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರು ಹೇಳಿದ್ದಾರೆ. ಈ ಯಂತ್ರಗಳು ಕಸವನ್ನು ಮೂರು ಹಂತಗಳಲ್ಲಿ ಬೇರ್ಪಡಿಸುತ್ತದೆ, ಇದರಿಂದ ಗೊಬ್ಬರ ಮಾಡಲು ಅನುಕೂಲ ಆಗುತ್ತದೆ. 15 ದಿನಗಳಲ್ಲಿ ಯಂತ್ರ ಅಳವಡಿಕೆ ಕಾರ್ಯ ಮುಕ್ತಾಯವಾಗುತ್ತದೆ. 3 ತಿಂಗಳ ಕಸ ವಿಲೇವಾರಿ ಘಟಕದಲ್ಲಿ ಕಸಗಳ ರಾಶಿ ಕಮ್ಮಿಯಾಗಿ ಸುಂದರ ಪರಿಸರ ಸೃಷ್ಟಿಯಾಗಲ್ಲಿದೆ. ಇದರಿಂದ ಅಕ್ಕ ಪಕ್ಕದ ಮನೆಗಳಿಗೆ ಶಾಲೆಗಳಿಗೆ ಸ್ವಚ್ಛ ವತಾವರಣ ಸಿಗುವ ಕಲ್ಪನೆಯಿಂದ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಸಿ, ಕಸದಿಂದ ಗೊಬ್ಬರ ತಯಾರಿಸಲಾಗುತ್ತದೆ. ಭೇಟಿಯ ಸಂದರ್ಭ ಪುರಸಭೆಯ ಸದಸ್ಯರಾದ ರಾಜೇಶ್ ಪದ್ಮನಾಭ, ಎಸ್ ಎಚ್.ಮತ್ತಿನ್. ಆರೋಗ್ಯ ನಿರೀಕ್ಷರಾದ ಶ್ರೀಮತಿ ಕೋಮಲ ಇದ್ದರು.
Comments are closed.