of your HTML document.

K N Rajanna: ‘ಬ್ಲೂ’ ಜೀನ್ಸ್ ಧರಿಸಿದ ಇಬ್ಬರು ಹುಡುಗಿಯರು ಮನೆಗೆ ಬಂದು…. ‘ಹನಿಟ್ರಾಪ್’ ರಹಸ್ಯ ಬಿಚ್ಚಿಟ್ಟ ಸಚಿವ ರಾಜಣ್ಣ!!

K N Rajanna : ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಸಚಿವರ ಹನಿಟ್ರ್ಯಾಪ್ ಪ್ರಕರಣ ಬಾರಿ ಸದ್ದು ಮಾಡಿತ್ತು. ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ‘ರಾಜ್ಯದ ಜನತೆ ಎದುರು ನನ್ನ ಮೇಲೆ ಹನಿಟ್ರ್ಯಾಪ್ ಆಗಿದೆ. ಈ ಬಗ್ಗೆ ದೂರು ಕೊಡಲಿದ್ದು, ಉನ್ನತ ಮಟ್ಟದ ತನಿಖೆ ಆಗಬೇಕು’ ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲಿಯೇ ಇಂದು ಮಂಗಳವಾರ ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಈ ವೇಳೆ ಮಾತನಾಡಿದ ಅವರು ನನ್ನ ಮನೆಗೆ ಹನಿಟ್ರ್ಯಾಪ್ ಮಾಡುವ ವಿಚಾರವಾಗಿ ಎರಡು ಸಲ ಒಬ್ಬನೇ ಹುಡುಗ ಹುಡುಗಿಯರನ್ನು ಕರೆದುಕೊಂಡು ಬಂದಿದ್ದನು. ಆದರೆ, ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರು ಇದ್ದರು. ಮೊದಲ ಸಲ ತಾನು ಹೈಕೋರ್ಟ್ ಲಾಯರ್ ಎಂದು ಬಂದು ಪರಿಚಯ ಮಾಡಿಕೊಂಡರು. ಎರಡನೇ ಬಾರಿ ಲಾಯರ್ ಅಂತ ಪರಿಚಯ ಮಾಡಿಕೊಂಡಿದ್ದರು. ನನಗೆ ಪೋಟೋ ತೋರಿಸಿದರೆ ಗುರುತು ಹಿಡಿಯುತ್ತೇನೆ ಎಂದು ಹನಿಟ್ರ್ಯಾಪ್ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರನ್ನು ಹುಡಕಿಕೊಂಡು ಹೋಗಿ ದೂರು ಕೊಡ್ತೀನಿ. ನನ್ನ ಬಳಿ ಹನಿಟ್ರ್ಯಾಪ್‌ಗೆ ಸಂಬಂಧಪಟ್ಟಂತೆ ಏನು ದಾಖಲೆಯಿಲ್ಲ, ದೂರು ಕೊಡ್ತಿದ್ದೀನಿ. ಒಟ್ಟು ಮೂರು ಪುಟಗಳ ದೂರು ಬರೆದು ಕೊಡುತ್ತಿದ್ದೇನೆ. ಇನ್ನು ನನ್ನ ಬೆಂಗಳೂರು ಮನಯಲ್ಲಿ ಸಿಸಿಟಿವಿ ಇರಲಿಲ್ಲ. ಹಾಗಾಗಿ ಸಿಸಿಟಿವಿ ವಿಡಿಯೋ ನಮ್ಮ ಬಳಿ ಇಲ್ಲ. ಯಾರು ಬಂದು ಹೋಗಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇನೆ. ಅಪರಿಚಿತರು ಅಂತ ದೂರಿನಲ್ಲಿ ದಾಖಲಿಸಿದ್ದೇನೆ ಎಂದು ಮಾಹಿತಿ ಬಿಚ್ಚಿಟ್ಟರು.

Comments are closed.