Krishna River: ತೆಲಂಗಾಣಕ್ಕೆ ಹರಿದ ಕೃಷ್ಣಾ ನದಿ ನೀರು: ಸರ್ಕಾರದ ವಿರುದ್ಧ ರೈತರ ಆಕ್ರೋಶ

Krishna River: ಈಗಾಗಲೇ ಬೇಸಿಗೆ ಕಾವು ಏರತೊಡಗಿದೆ. ನೀರಿನ ಸಮಸ್ಯೆ ತಲೆದೋರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ ಕುಡಿಯಲು, ಕೃಷಿಗೆ ನೀರಿನ(Water) ಅಗತ್ಯ ಇದೆ. ಆದರೆ ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರ(Congress Govt) ಕದ್ದು ಮುಚ್ಚಿ ತೆಲಂಗಾಣಕ್ಕೆ(Telangana) ಕೃಷ್ಣಾ ನದಿ ನೀರನ್ನು ಬಿಡುತ್ತಿದ್ದು, ರಾಜ್ಯದ ರೈತರಿಗೆ(Farmer) ಬರೆ ಎಳೆಯುತ್ತಿದೆ ಎಂದು ವಿಜಯಪುರ, ಕಲಬುರಗಿ, ಯಾದಗಿರಿ ರೈತರು ಆಕ್ರೋಶ ಹೊರಹಾಕಿದ್ದಾರೆ.
ಹೌದು, ರಾಜ್ಯ ಸರ್ಕಾರ ನಾರಾಯಣಪುರದ ಜಲಾಶಯದಿಂದ ಕದ್ದುಮುಚ್ಚಿ ತೆಲಂಗಾಣಕ್ಕೆ 10 ಟಿಎಂಸಿ ನೀರನ್ನು ಹರಿಸಿದೆ ಎಂದು ಆರೋಪಿಸಲಾಗಿದೆ. ಇಲ್ಲಿನ ಕಾಲುವೆಗಳಲ್ಲಿ ನೀರಿಲ್ಲ ಕೆರೆಗಳನ್ನು ತುಂಬಿಸಲು ಮುಂದಾಗಿಲ್ಲ ನಮ್ಮ ರೈತರ ಬೆಳೆಗಳು ಒಣಗುತ್ತಿವೆ, ಕುಡಿಯಲು ನೀರಿಲ್ಲ. ಆದರೂ ತೆಲಂಗಾಣಕ್ಕೆ ರಾಜ್ಯ ಸರ್ಕಾರ ಒಲವು ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ಮೊದಲು ರಾಜ್ಯ ಸರ್ಕಾರ ತೆಲಂಗಾಣಕ್ಕೆ 1.5 ಟಿಎಂಸಿ ನೀರು ಹರಿಸುವುದಾಗಿ ಹೇಳಿ 10 ಟಿಎಂಸಿ ನೀರನ್ನು ಹರಿಸಿದೆ ಎಂದು ರೈತರು ಆರೋಪಿಸಿದ್ದಾರೆ. ಸರ್ಕಾರದ ನಡೆಗೆ ಕೃಷ್ಣಾ ನದಿ ಪಾತ್ರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments are closed.