Bengaluru : ಧರ್ಮಸ್ಥಳ, ಹೆಗ್ಗಡೆಯವರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಜಾನ್ ಡೋ ಆದೇಶ ಜಾರಿ – ‘ಜಾನ್ ಡೋ ಆದೇಶ ‘ ಅಂದ್ರೆ ಏನು?

Bengaluru : ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಇದರ ನಡುವೆ ಕೆಲವು ವಾರಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೋ ಬೃಹತ್ ಮಟ್ಟದಲ್ಲಿ ವೈರಲ್ ಆಗಿತ್ತು. ರಾಜ್ಯಾದ್ಯಂತ ಈ ವಿಡಿಯೋ ಕುರಿತು ಪರ ವಿರೋಧಗಳ ಚರ್ಚೆಯಾಗುತ್ತು. ಮರೆತು ಹೋಗಿದ್ದಂತಹ ಪ್ರಕರಣ ಮತ್ತೆ ಮುನ್ನಲೆಗೆ ಬಂದಿತ್ತು. ಮತ್ತೆ ರಾಜ್ಯಾದ್ಯಂತ ಕೆಲವು ಸಂಘಟನೆಗಳು ಎಚ್ಚೆತ್ತುಕೊಂಡು ಈ ಕುರಿತಾಗಿ ಹೋರಾಟವನ್ನು ಮುನ್ನಡೆಸಿದ್ದವು. ಅಲ್ಲದೆ ಕೆಲವರು ಈ ವಿಡಿಯೋವನ್ನು ವಿರೋಧಿಸಿ ಸಮೀರ್ ಎಂಡಿ ವಿರುದ್ಧ ಕಾನೂನು ಸಮರವನ್ನು ಕೂಡ ಸಾರಿದ್ದರು. ಬಳಿಕ ಸಮೀರ್ ಅವರ ಮೇಲೆ FIR ಹಾಕುವುದನ್ನು ಹೈ ಕೋರ್ಟ್ ತಡೆದಿತ್ತು. ಈ ಈ ಬೆನ್ನಲ್ಲೇ ಸೌಜನ್ಯ ಪ್ರಕರಣದ ಕುರಿತಾಗಿ ಎರಡನೇ ವಿಡಿಯೋವನ್ನು ಸಮೀರ್ ಅವರು ಯೂಟ್ಯೂಬ್ ನಲ್ಲಿ ಹರಿ ಬಿಟ್ಟಿದ್ದರು. ಇದರಲ್ಲಿ ಸೌಜನ್ಯ ಪ್ರಕರಣದ ಸಾಕ್ಷಿ ನಾಶ ಆಗಿದ್ದು ಹೇಗೆ ಎಂಬ ಮಾಹಿತಿ ನೀಡಿದ್ದರು. ಇದು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈ ಬೆನ್ನಲ್ಲೇ ಇದೀಗ ಧರ್ಮಸ್ಥಳ, ಹೆಗ್ಗಡೆಯವರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಜಾನ್ ಡೋ ಆದೇಶ ಜಾರಿ ಮಾಡಲಾಗಿದೆ. ಹಾಗಿದ್ದರೆ ಜಾನ್ ಡೋ ಆದೇಶ ಅಂದ್ರೆ ಏನು?

ಇದನ್ನೂ ಓದಿ: ಪುತ್ತೂರು ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ

ಏನಿದು ಜಾನ್ ಡೋ ಆದೇಶ..?
ಅಜ್ಞಾತ ಅಥವಾ ಪತ್ತೆಯಾಗದ ವ್ಯಕ್ತಿಗಳ ವಿರುದ್ಧ ಜಾರಿಯಾಗುವ ಕಾನೂನು ಕ್ರಮ ಇದಾಗಿದ್ದು, ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ ಆಯಪ್‌, ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌, ಯೂ-ಟ್ಯೂಬ್‌ ಹಾಗೂ ದೃಶ್ಯ ಮಾಧ್ಯಮ ಸೇರಿದಂತೆ ಮತ್ತಿತ್ತರ ಮಾಧ್ಯಮಗಳ ಮೂಲಕ ನೀಡಲಾಗುತ್ತಿರುವ ಅವಹೇಳನಕಾರಿ ಹೇಳಿಕೆ ಮತ್ತು ಅಪಪ್ರಚಾರಕ್ಕೆ ಕಡಿವಾಣ ಹಾಕಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆ ಮಾಡುವುದನ್ನು ತಡೆಯಲು ಈ ಆದೇಶ ಬಹಳ ಪ್ರಮುಖವಾಗಿದೆ. ನ್ಯಾಯಾಲಯ ಹೊರಡಿಸಿರುವ ಈ ಆದೇಶವನ್ನು ಉಲ್ಲಂಘಿಸಿದ್ದೇ ಆದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ: ಬಂಟ್ವಾಳ: ಎಸ್‌ಎಸ್‌ಎಲ್‌ಸಿ ಬಾಲಕಿಗೆ ಲೈಂಗಿಕ ಕಿರುಕುಳ

ಹಾಗೇ ಸಾಮಾಜಿಕ ಜಾಲತಾಣಗಳು ಮತ್ತು ಇತರೆ ಮಾಧ್ಯಮ ಸಂಸ್ಥೆಗಳು ಮಾಡಿರುವ ಅಥವಾ ಮಾಡುವ ಅವಹೇಳನಕಾರಿ ವರದಿಗಳ ಮೇಲೆ ನಿರ್ಬಂಧನೆ ಹೇರಿ ಕೂಡಲೇ ಅಳಿಸಿ ಹಾಕುವಂತೆ ಆದೇಶಿಸಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳ ಹಾಗೂ ಅವರ ಕುಟುಂಬದ ವಿರುದ್ಧ ಮಾಡುತ್ತಿರುವ ಅಪಪ್ರಚಾರ ತಡೆಯುವಲ್ಲಿ ಈ ಆದೇಶ ಪ್ರಮುಖ ಪಾತ್ರವಹಿಸಲಿದೆ.

 

Comments are closed.