Medical Exhibition 2025: ಕೊಡಗಿನಲ್ಲಿ ಪ್ರಥಮ ಬಾರಿಗೆ ಅವೆನ್ಸಿಸ್ 2025 ಕಾರ್ಯಕ್ರಮ: ಶಾಸಕದ್ವಯರಿಂದ ಮೆಚ್ಚುಗೆ

Medical Exhibition 2025: ಕೊಡಗು(Kodagu) ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿ( Medical collage of Medical) ವತಿಯಿಂದ ಮಾರ್ಚ್ 27 ಮತ್ತು 28 ರಂದು ಕೊಡಗು ಜಿಲ್ಲಾಸ್ಪತ್ರೆಯಲ್ಲಿ ನಡೆಯಲಿರುವ ಬೃಹತ್ ಆರೋಗ್ಯ ಜಾಗೃತಿ ವೈದ್ಯಕೀಯ ಪ್ರದರ್ಶನಕ್ಕೆ ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ(A S Ponnanna) ಹಾಗೂ ಡಾ ಮಂತರ್ ಗೌಡ(Dr Manthar Gowda) ರವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊಡಗು ಮೆಡಿಕಲ್ ಕಾಲೇಜ್ ಸ್ಥಾಪನೆಗೊಂಡು ಹತ್ತು ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಅವೆನ್ಸಿಸ್ 2025 ಕಾರ್ಯಕ್ರಮ ನಡೆಯಲಿದ್ದು ಸುಮಾರು 400 ರಷ್ಟು ವೈದ್ಯರು ಹಾಗೂ ವೈದ್ಯಕೀಯ ವಿಧ್ಯಾರ್ಥಿಗಳು ಮತ್ತು ಸಿಬ್ಬಂದಿಗಳು 30 ಮಾದರಿಗಳ ಕಾಯಿಲೆಗಳಿಗೆ ಸಂಭಂದಿಸಿದ 55 ವಿಭಾಗಗಳಲ್ಲಿ ಮಾಹಿತಿ,ಸಲಹೆ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ.
ಇಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣನವರನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರೊಂದಿಗೆ ಅವೆನ್ಸಿಸ್ 2025 ತಂಡದ ನಿಯೋಗದ ಪ್ರಮುಖರಾದ ಡಾ ಪುರುಷೋತ್ತಮ, ಪೂರ್ಣ ಚಂದ್ರ, ಶಶಾಂಕ್. ವೈರವರು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.
ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕದ್ವಯರು ಕೊಡಗು ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ಇದೊಂದು ಅತ್ಯಂತ ಉಪಯುಕ್ತ ವಿನೂತನ ಕಾರ್ಯಕ್ರಮವಾಗಿದ್ದು ಸಮಾಜದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ರೂಪಿಸಿರುವ ಕೊಡಗು ಮೆಡಿಕಲ್ ಕಾಲೇಜಿನ ಎಲ್ಲಾ ವೈದ್ಯರುಗಳು, ವೈದ್ಯಕೀಯ ವಿಧ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಲ್ಲದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದರು.
Comments are closed.