Rayachur: ಬೆಕ್ಕು ಸಾಕುವವರೇ ಹುಷಾರ್, ರಾಜ್ಯಕ್ಕೆ ಕಾಲಿಟ್ಟಿದೆ ಹೊಸ ವೈರಸ್- 100ಕ್ಕೂ ಹೆಚ್ಚು ಬೆಕ್ಕುಗಳ ಸಾವು!!

Rayachur: ಹಕ್ಕಿ ಜ್ವರದ ಆತಂಕ ಕಡಿಮೆ ಆಯ್ತು ಎನ್ನುವಾಗಲೇ ಕರ್ನಾಟಕಕ್ಕೆ (Karnataka) ಮತ್ತೊಂದು ಮಾರಕ ಸೋಂಕು ವಕ್ಕರಿಸಿದೆ. ಇದು ಬೆಕ್ಕು ಸಾಕು ಅವರಿಗೆ ಅಘಾತಕಾರಿ ಸುದ್ದಿಯಾಗಿದ್ದು, ರಾಜ್ಯದೆಲ್ಲೆಡೆ ಮಾರಣಾಂತಿಕ ಎಫ್​ಪಿವಿ ವೈರಸ್ (Feline panleukopenia virus) ಸೋಂಕು ಹರಡುತ್ತಿದೆ. ಇದರಿಂದ ರಾಜ್ಯದಲ್ಲಿ 100ಕ್ಕೂ ಬೆಕ್ಕುಗಳು ಸಾವನ್ನಪ್ಪಿರುವ ಮಾಹಿತಿ ಹೊರಬಿದ್ದಿದೆ.

ಹೌದು, ಹಳ್ಳಿಗಳಲ್ಲಿ ಬಹುತೇಕರು ಬೆಕ್ಕುಗಳನ್ನು ಸಾಕುತ್ತಾರೆ. ಇದೀಗ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ರಾಜ್ಯದ ವಿವಿದೆಡೆ ವೈರಸ್ ಸೋಂಕು ಹರಡುತ್ತಿದೆ. ಹಳ್ಳಿಗಳಲ್ಲಿ ಬಹುತೇಕರು ಬೆಕ್ಕುಗಳನ್ನು ಸಾಕುತ್ತಾರೆ. ಇದೀಗ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ರಾಜ್ಯದ ವಿವಿದೆಡೆ ವೈರಸ್ ಸೋಂಕು ಹರಡುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಬೆಕ್ಕುಗಳನ್ನು ಕಾಡುವ ಅಥವಾ ಪೆಟ್​ಗಳಿಗೆ ವಕ್ಕರಿಸಿರುವ ಈ ವೈರಸ್‌ನಿಂದ ಪ್ರಾಣಿಪ್ರಿಯರು ಕಂಗಾಲಾಗಿದ್ದಾರೆ.

ರಾಯಚೂರಿನಲ್ಲಿ ಮೊದಲಾಗಿ ಕಂಡುಬಂದಿರುವ ಈ ವೈರಸ್‌ ಹಕ್ಕಿಜ್ವರದಂತೆಯೇ ರಾಜ್ಯದ ಇತರ ಕಡೆಗಳಿಗೆ ಹಬ್ಬುವ ಸೂಚನೆ ತೋರಿಸಿದೆ. ಹೀಗಾಗಿ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಇನ್ನೂ ಇದು ಕೇವಲ ಬೆಕ್ಕುಗಳಲ್ಲಿ ಮಾತ್ರ ಕಂಡುಬರುವ ಸಾಂಕ್ರಾಮಿಕ ರೋಗ ಎಂದು ರಾಯಚೂರಿನ ಪಶುವೈದ್ಯರು ಹೇಳುತ್ತಾರೆ. ಎಫ್​ಪಿವಿ ಬೆಕ್ಕುಗಳಿಗೆ ಮಾರಣಾಂತಿಕ ಸೋಂಕು ಅಗಿರುವುದರಿಂದ ಬೆಕ್ಕು ಸಾಕಿರುವವರು ಹತ್ತಿರದ ಪಶುವೈದ್ಯಕೀಯ ಅಸ್ಪತ್ರೆಗೆ ಅದನ್ನು ಕರೆದೊಯ್ದು ಚೆಕಪ್ ಮಾಡಿಸುವುದು ಒಳಿತು. ನಾಯಿ ಹಾಗೂ ಬೆಕ್ಕುಗಳನ್ನು ಜೊತೆಯಾಗಿ ಸಾಕುತ್ತಿರುವವರು ಕೂಡ ಎಚ್ಚರವಾಗಿರಬೇಕು.

Comments are closed.