Baby Shower: ಪೊಲೀಸ್‌ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಸೀಮಂತ ಕಾರ್ಯ..!!

Share the Article

Baby Shower: ಪೊಲೀಸರು ಠಾಣೆಯಲ್ಲಿ(Police station) ಕರ್ತವ್ಯ ಮಾಡುತ್ತಿದ್ದ ಗರ್ಭಿಣಿ ಮಹಿಳಾ ಪೊಲೀಸ್ ಗೆ(Lady Police) ಸೀಮಂತ ಕಾರ್ಯವನ್ನು ಮಾಡಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಪೊಲೀಸ್ ಠಾಣೆಯ ಸಿಪಿ‌.ಪೂರ್ಣಿಮಾರವರಿಗೆ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿವರ್ಗದ ಸಹೋದ್ಯೋಗಿಗಳು ಸೇರಿ ಸೀಮಂತ ಕಾರ್ಯಕ್ರಮ ನಡೆಸಿದ್ದಾರೆ. ಈ ಮೂಲಕ ಪೊಲೀಸ್ ಠಾಣೆಗಳು ಜನಸ್ನೇಹಿ ಆಗಿರುವುದರ ಜೊತೆಗೆ ಸಿಬ್ಬಂದಿ ಆತ್ಮೀಯತೆಯಿಂದ ಇದ್ದಾರೆ ಎಂಬುದನ್ನು ಪೊಲೀಸರು ತೋರಿಸಿದ್ದಾರೆ.

ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಸಿ.ಪಿ.ಪೂರ್ಣಿಮಾ ಅವರಿಗೆ ಕೈ ಬಳೆ ತೊಡಿಸಿ, ಹೂ ಮುಡಿಸುವ ಮೂಲಕ ಸೀಮಂತ ಶಾಸ್ತ್ರ ಮಾಡಲಾಯಿತು. ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಠಾಣೆಯ ಮಹಿಳಾ ಸಿಬ್ಬಂದಿಗಳು ಸೀಮಂತ ಕಾರ್ಯ ನಡೆಯಿತು. ಠಾಣೆಯ ಎಲ್ಲಾ ಸಿಬ್ಬಂದಿ ಶುಭ ಹಾರೈಸಿದ ಪರಿಗೆ ಸಿ.ಪಿ.ಪೂರ್ಣಿಮಾ ಭಾವುಕರಾದರು. ಬಳಿಕ ಮಾತನಾಡಿದ ಅವರು, ಮನೆಯಲ್ಲಿ ಸಿಗದ ಈ ರೀತಿಯ ಆತ್ಮೀಯತೆ, ಠಾಣೆಯಲ್ಲಿ ಸಿಕ್ಕಿದೆ. ಪೊಲೀಸ್‌ ಠಾಣೆಗಳು ಜನಸ್ನೇಹಿ ಮಾತ್ರವಲ್ಲ. ಸಿಬ್ಬಂದಿ ನಡುವಿನ ಸ್ನೇಹ ಬಾಂಧವ್ಯಕ್ಕೂ ಸಾಕ್ಷಿಯಾಗಿದೆ ಎಂದರು. ಒಟ್ಟಾರೆ ಮಹಿಳೆ ಜೀವನದಲ್ಲಿ ತುಂಬಾ ವಿಶೇಷವಾದ ಸೀಮಂತವನ್ನು ಠಾಣಾ ಸಿಬ್ಬಂದಿ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Comments are closed.