Italy: ವೆಬ್‌ಸೈಟ್‌ ಅಲ್ಲಿ ನಗ್ನ ಫೋಟೋ, ವಿಡಿಯೋ ಹಾಕಿ ಹಣ ಗಳಿಸುತ್ತಿದ್ದ 29ರ ಟೀಚರ್ – ಶಾಲೆಯಿಂದ ಸಸ್ಪೆಂಡ್

Italy: ಶಾಲಾ ಶಿಕ್ಷಕಿ ಒಬ್ಬಳು ‘ಓನ್ಲಿ ಫ್ಯಾನ್ಸ್’ ಪ್ಲಾಟ್ಫಾರ್ಮ್ ನಲ್ಲಿ ತನ್ನ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ಹಾಕಿ ಹಣ ಗಳಿಸುತ್ತಿದಂತಹ ಪ್ರಕರಣ ಬೆಳಕಿಗೆ ಬಂದಿದ್ದು ಆಕೆಯನ್ನು ಶಾಲೆಯಿಂದ ಸಸ್ಪೆಂಡ್ ಮಾಡಲಾಗಿದೆ.

ಹೌದು, ಇಟಲಿ(Italy)ಯ ಕ್ಯಾಥೋಲಿಕ್ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ 29 ವಯಸ್ಸಿನ ಎಲೆನಾ ಮರಗಾ, ಓನ್ಲಿಫ್ಯಾನ್ಸ್ ಮಾಡೆಲ್ ಆಗಿ ಮೂನ್‌ಲೈಟ್ ಮಾಡುತ್ತಿದ್ದಾಗ ಸಿಕ್ಕಿಬಿದ್ದು, ಸಸ್ಪೆಂಡ್‌ ಆಗಿದ್ದಾರೆ.

ಅಂದಹಾಗೆ ವಯಸ್ಕರ ಫೋಟೊ ಮತ್ತು ವೀಡಿಯೋಗಳನ್ನು ಪೋಸ್ಟ್‌ ಮಾಡಿ, ಚಂದಾದಾರರೊಡನೆ ಹಂಚಿಕೊಳ್ಳುವ ಆಯ್ಕೆಯನ್ನು ಒನ್ಲಿಫ್ಯಾನ್ಸ್‌ ಬಳಕೆದಾರರಿಗೆ ನೀಡುತ್ತದೆ. ಈ ತಾಣದಲ್ಲಿ ತನ್ನ ಚಿತ್ರ, ವೀಡಿಯೋಗಳನ್ನು ಶಿಕ್ಷಕಿ ಎಲೆನಾ ಹಂಚಿಕೊಳ್ಳುತ್ತಿದ್ದರು. ಇದನ್ನು ಪೋಷಕರು ಗಮನಿಸಿ ಆಡಳಿತ ಮಂಡಳಿಗೆ ತಿಳಿಸಿದ್ದರು. ದೂರು ಸ್ವೀಕರಿಸಿದ ನಂತರ ಶಾಲಾ ಆಡಳಿತವು ಕ್ರಮ ಕೈಗೊಂಡಿದೆ.

ಇನ್ನು ಈ ಕುರಿತಾಗಿ ಪ್ರತಿಕ್ರಿಯಿಸಿದ ಎಲೆನಾ ಅವರು ನಾನು ಮಕ್ಕಳಿಗೆ ಪಾಠ ಮಾಡುವುದರಿಂದ ಹೆಚ್ಚು ಹಣವನ್ನು ಗಳಿಸುವುದಿಲ್ಲ. ಇದು ನನ್ನ ಜೀವನ ನಡೆಸಲು ಸಾಲುತ್ತಿಲ್ಲ. ಹೀಗಾಗಿ ಬಿಡುವಿನ ವೇಳೆ ನಾನು ಈ ಕೆಲಸವನ್ನು ಮಾಡಿಕೊಂಡಿದ್ದೆ ಇದರಿಂದ ಯಾರಿಗೂ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಒಂದು ತಿಂಗಳ ಹಿಂದೆ ಒನ್ಲಿಫ್ಯಾನ್ಸ್ ಅನ್ನು ತೆರೆದೆ. ಕುತೂಹಲದಿಂದ ಮೋಜಿಗಾಗಿ, ಅದರಲ್ಲಿ ನಿಜವಾಗಿಯೂ ಹಣ ಗಳಿಸಬಹುದೇ ಎಂದು ನೋಡಲು ತೆರೆದೆ. ಶಿಕ್ಷಕ ವೃತ್ತಿಯಿಂದ ನನಗೆ ತಿಂಗಳಿಗೆ ಸಿಗುವ ಸಂಬಳ, ಇದರಲ್ಲಿ ಒಂದೇ ದಿನದಲ್ಲಿ ಸಿಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

Comments are closed.