of your HTML document.

Vitla: ವಿಟ್ಲ; ಏಕಾಏಕಿ ಬ್ರೇಕ್‌ ಹಾಕಿದ ಕೇರಳ ಸರಕಾರಿ ಬಸ್‌; ಕಾರು ಜಖಂ

Vitla: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂದೆ ಕೇರಳ ಸರಕಾರಿ ಬಸ್‌ ಏಕಾಏಕಿ ನಿಂತ ಕಾರಣ ಹಿಂಬದಿಯಿಂದ ಬಂದ ಕಾರು ಗುದ್ದಿದ ಘಟನೆ ನಡೆದಿದೆ. ಕಾರಿನ ಮುಂಭಾಗ ತೀವ್ರವಾಗಿ ಹಾನಿಗೊಂಡಿದೆ.

ವಿಟ್ಲ ಪೇಟೆಯಿಂದ ಕಾಸರಗೋಡು ದಿಕ್ಕಿಗೆ ತೆರಳುತ್ತಿದ್ದ ಕೇರಳ ಸರಕಾರಿ ಬಸ್‌, ರಸ್ತೆಯಲ್ಲಿ ನಿಂತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ನಂತರ ಬಸ್‌ ರಸ್ತೆಯಲ್ಲೇ ಇದ್ದಿದ್ದು, ಇದರಿಂದ ಪ್ರಯಾಣಕರಿಗೆ ಸಂಕಷ್ಟ ಉಂಟಾಯಿತು.

ಈ ಕುರಿತು ಕೇರಳ ಸಾರಿಗೆ ಇಲಾಖೆಯ ಗಮನಕ್ಕೆ ತರಲಾಯಿತಾದರೂ, ಚಾಲಕರು ಬಸ್ಸನ್ನು ವಿಟ್ಲ ಕೆಎಸ್‌ಆರ್‌ಟಿಸಿ ನಿಲ್ದಾಣದ ಒಳಗೆ ತೆಗೆದುಕೊಂಡು ಹೋಗಿಲ್ಲ.

Comments are closed.