Bigg Boss: ಕೈಯಲ್ಲಿ ಲಾಂಗ್‌ ಹಿಡಿದು ವಿಡಿಯೋಮಾಡಿ ಸಂಕಷ್ಟಕ್ಕೊಳಗಾದ ವಿನಯ್‌ ಗೌಡ, ರಜತ್‌ ಬುಜ್ಜಿ; FIR ಬಳಿಕ ಹೇಳಿದ್ದೇನು?

Bigg Boss: ಬಿಗ್‌ಬಾಸ್‌ ಆನೆ ಎಂದೇ ಫೇಮಸ್‌ ಆಗಿರುವ ವಿನಯ್‌ ಗೌಡ, ಹಾಗೂ ರಜತ್‌ ಬುಜ್ಜಿ ಮೇಲೆ ಎಫ್‌ಐಆರ್‌ ಆಗಿದೆ.

ಬೆಂಗಳೂರಿನ ಬಸವೇಶ್ವರ ಪೊಲೀಸ್‌ ಠಾಣೆಯಲ್ಲಿ ನಟ ವಿನಯ್‌ ಗೌಡ ಹಾಗೂ ರಜತ್‌ ಕಿಶನ್‌ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ನಾಗಬಾವಿಯ ಅಕ್ಷಯ್‌ ಸ್ಟುಡಿಯೋದಲ್ಲಿ ಖಾಸಗಿ ರಿಯಾಲಿಟಿ ಶೋಗೆ ಕುರಿತಂತೆ ವಿಡಿಯೋ ಶುಟ್‌ ಮಾಡಿದ್ದು, ಅಲ್ಲಿ ನಾನು ಪುಷ್ಪಾ ಪಾತ್ರವನ್ನು ಮತ್ತು ರಜತ್‌ ಕಿಶನ್‌ ದರ್ಶನ್‌ ಪಾತ್ರವನ್ನು ಮಾಡಿದ್ದಾರೆ. ಮನರಂಜನೆ ಮತ್ತು ಪ್ರಚಾರದ ಉದ್ದೇಶಕ್ಕಾಗಿ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾಗಿಯೂ, ಹೀಗಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

Comments are closed.