Kukke Subrmanya: ವಿವಾದಿತ ಜಾಗ ಮತ್ತೆ ದೇವಾಲಯದ ಸುಪರ್ದಿಗೆ!

Share the Article

Subrmanya: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವು ದೇವಾಲಯದ ಸುಪರ್ದಿಗೆ ಬಂದಿದೆ. ನ್ಯಾಯಾಲಯವು ದೇವಾಲಯದ ಸುಪರ್ದಿಗೆ ಕೊಟ್ಟಿದೆ. ಇದೀಗ ಕಟ್ಟಡದ ತೆರವು ಕಾರ್ಯ ನಡೆಸಲಾಗಿದೆ.

ಸಬ್ರಹ್ಮಣ್ಯದ ಕಾಶಿಕಟ್ಟೆ ರಥಬೀದಿಯ ಮಧ್ಯೆ ಅಂಚೆ ಕಚೇರಿ ಮುಂಭಾಗದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಾಗೂ ಕುಂಞಕ್ಕ ಎಂಬುವವರಿಗೆ ಜಾಗದ ಕುರಿತು ತಕರಾರು ಇತ್ತು. ಇದು ನ್ಯಾಯಾಲದಲ್ಲಿತ್ತು. ಇದೀಗ ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು, ಜಾಗವು ದೇವಸ್ಥಾನಕ್ಕೆ ಸಂಬಂಧಿಸಿದ ಜಾಗ ಎಂದು ಆದೇಶ ನೀಡಲಾಗಿತ್ತು.

ಇದೀಗ ನ್ಯಾಯಾಲಯದ ಆದೇಶದ ನಂತರ ಸದರಿ ಜಾಗವನ್ನು ದೇವಾಲಯಕ್ಕೆ ಹಸ್ತಾಂತರ ಮಾಡಲಾಗಿದೆ. ಆ ಜಾಗದಲ್ಲಿದ್ದ ಹಳೆ ಕಟ್ಟಡ ತೆರವು ಕಾರ್ಯಾಚರಣೆ ನಡೆದಿದೆ.

Comments are closed.