Kerala: BJP ಕಾರ್ಯಕರ್ತನ ಕೊಲೆ ಪ್ರಕರಣ; 8 ಸಿಪಿಐ(ಎಂ) ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ!

Kannuru: ಎರಡು ದಶಕಗಳ ಹಿಂದೆ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಂಟು ಮಂದಿ ಸಿಪಿಐ(ಎಂ) ಕಾರ್ಯಕರ್ತರಿಗೆ ಕೇರಳದ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಎಳಂಬಿಲಾಯಿ ಸೂರಜ್‌ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿದ್ದ ಪ್ರಕರಣದಲ್ಲಿ ಒಂಭತ್ತು ಸಿಪಿಐ(ಎಂ) ಕಾರ್ಯಕರ್ತರು ತಪ್ಪಿಸ್ಥರು ಎಂದು ತಲಶ್ಯೇರಿ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಕೆ.ಟಿ.ನಿಸಾರ್‌ ಅಹಮ್ಮದ್‌ ಶುಕ್ರವಾರ ಘೊಷಣೆ ಮಾಡಿದ್ದು, ಎಂಟು ಮಂದಿಗೆ ಜೀವಾವಧಿ ಶಿಕ್ಷೆ, ತಲಾ 50000 ರೂ. ದಂಡ, ಮತ್ತೊಬ್ಬ ಅಪರಾಧಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25000ರೂ. ದಂಡ ವಿಧಿಸಲಾಗಿದೆ.

2005, ಆಗಸ್ಟ್‌ 7 ರಂದು ಬೆಳಗ್ಗೆ 8.40 ಕ್ಕೆ ಸೂರಜ್‌ ಹತ್ಯೆ ಮಾಡಲಾಗಿತ್ತು. ಈತ ಸಿಪಿಐ (ಎಂ) ತೊರೆದು ಬಿಜೆಪಿ ಸೇರಿದ ಬಳಿಕ ರಾಜಕೀಯ ದ್ವೇಷದಲ್ಲಿ ಕೊಲೆ ಮಾಡಲಾಗಿತ್ತು.

Comments are closed.