U T Khadar: ಈ ಒಂದು ಕೆಲಸ ಮಾಡಿದ್ರೆ 18 ಶಾಸಕರ ಅಮಾನತು ರದ್ದು – ಸ್ಪೀಕರ್ ಖಾದರ್

U T Khadar: ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿ 18 ಶಾಸಕರನ್ನು ಅಮಾನತು ಮಾಡಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಬಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ಕುರಿತಾಗಿ ಸ್ಪೀಕರ್ ಯುಟಿ ಖಾದರ್(U T Khadar) ಅವರು ಪ್ರತಿಕ್ರಿಸಿದ್ದು 18 ಶಾಸಕರು ಈ ಒಂದು ಕೆಲಸವನ್ನು ಮಾಡಿದರೆ ಅಮಾನತು ರದ್ದು ಮಾಡುತ್ತೇನೆ ಎಂದು ಹೇಳಿದ್ದಾರೆ.
ಹೌದು, ಸ್ಪೀಕರ್ ಯುಟಿ ಖಾದರ್ ಅವರು, ಅಮಾನತು ಆದ ಶಾಸಕರು ಅವರ ತಪ್ಪನ್ನು ತಿಳಿದುಕೊಂಡು ಮನವಿ ಮಾಡಲಿ. ಆಗ ಬಿಜೆಪಿಯ 18 ಜನ ಶಾಸಕರ ಆರು ತಿಂಗಳ ಅಮಾನತು ಅವಧಿಯನ್ನು ಕಡಿಮೆ ಮಾಡುತ್ತೇನೆ ಹೇಳಿದ್ದಾರೆ. ಬಿಜೆಪಿಯ ಶಾಸಕರು ಕಾಗದಗಳನ್ನು ಹರಿದು ನನ್ನ ಮೇಲೆ ಎಸೆಯುವ ಮೂಲಕ ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ್ದಾರೆ. ನನ್ನ ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿಪಡಿಸಿದ್ದಾರೆ. ಹೀಗಾಗಿ ನಾನು ನಿಯಮಾದ ಪ್ರಕಾರ ಕ್ರಮ ಕೈಗೊಂಡಿದ್ದೇನೆ ಎಂದು ಖಾದರ್ ಅವರು ಹೇಳಿದ್ದಾರೆ.
Comments are closed.