of your HTML document.

Gujarat: ಪ್ರತಿದಿನ ನೌಟ್‌ಗೌನ್‌ ಧರಿಸುವಂತೆ ಒತ್ತಾಯ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತ್ನಿ!

Gujarat: ಗಂಡ ಹೆಂಡತಿಗೆ ದಿನಾ ನೈಟ್‌ಗೌನ್‌ ಧರಿಸುವಂತೆ ಒತ್ತಾಯ ಮಾಡುತ್ತಿದ್ದು, ಹಾಗೂ ಅತ್ತೆ ಮಾವ ಕೂಡಾ ನನ್ನ ಜೀವನಶೈಲಿ ಮತ್ತು ಉಡುಗೆ ತೊಡಗೆಯನ್ನು ನಿಯಂತ್ರಣ ಮಾಡಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.

ಈ ವಿಚಿತ್ರ ಘಟನೆ ನಡೆದಿದ್ದು, ಗುಜರಾತ್‌ನ ಅಹಮದಾಬಾದ್‌ನಲ್ಲಿ. ವಿವಾಹಿತ ಮಹಿಳೆ (21 ವರ್ಷ) ತನ್ನ ಗಂಡ ಹಾಗೂ ಅತ್ತೆ ಮಾವನ ವಿರುದ್ಧ ಪ್ರತಿ ದಿನ ನೈಟ್‌ಗೌನ್‌ ಧರಿಸು ಎಂದು ಒತ್ತಾಯ ಮಾಡುತ್ತಾರೆ ಎಂದು ಹೇಳಿ ದೂರನ್ನು ದಾಖಲು ಮಾಡಿದ್ದಾರೆ.

2023 ರ ಮೇ ಯಲ್ಲಿ ಸೌದಿ ಅರೇಬಿಯಾದಲ್ಲಿ ಮಹಿಳೆ ವಿವಾಹವಾಗಿದ್ದಾಳೆ. ಮದುವೆಯ ನಂತರ ಅಹಮದಾಬಾದ್‌ನ ಬಾಪುನಗರದಲ್ಲಿರುವ ತನ್ನ ಅತ್ತೆಯ ಮನೆಗೆ ಬಂದಿದ್ದಾಳೆ. ಮೊದ ಮೊದಲಿಗೆ ಎಲ್ಲವೂ ಚೆನ್ನಾಗಿತ್ತು. ನಂತರ ಪತಿಯ ನಿಜ ಬಣ್ಣ ಹೊರಗೆ ಬಂದಿದೆ. ವೃತ್ತಿಯಲ್ಲಿ ವೈದ್ಯನಾಗಿರುವ ಪತಿ ಮದ್ಯದ ಅಮಲಿನಲ್ಲಿ ಬಂದು ಆಕೆಯನ್ನು ನಿಂದನೆ ಮಾಡುವುದು, ಅಲ್ಲದೆ ಪ್ರತಿದಿನ ನೈಟ್‌ಗೌನ್‌ ಧರಿಸುವಂತೆ, ಡ್ರೆಸ್ಸಿಂಗ್‌ ಸೆನ್ಸ್‌ ನಿಯಂತ್ರಣ ಮಾಡೋಕೆ ಶುರು ಮಾಡಿದ್ದಾನೆ. ಇದಕ್ಕೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು ತನ್ನ ಅತ್ತೆ-ಮಾವಂದಿರಿಗೆ ಹೇಳಿದಾಗ ಅವರು ಕೂಡಾ ಆತನ ಮಾತನ್ನು ಕೇಳು ಎಂದು ಹೇಳಿದ್ದಾರೆ.

ಡ್ರೆಸ್ಸಿಂಗ್‌ ಸೆನ್ಸ್‌ ಮಾತ್ರವಲ್ಲದೇ ನಾನು ಯಾವಾಗ ಮಲಗಬೇಕು? ಯಾವಾಗ ಏಳಬೇಕು ಎನ್ನುವುದನ್ನೂ ಕೂಡಾ ಗಂಡ ನಿರ್ಧಾರ ಮಾಡುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ತನ್ನ ಪಾದಗಳಿಗೆ ಮಸಾಜ್‌ ಮಾಡಲು ಹೇಳುವುದು, ನಿದ್ದೆ ಮಾಡಲು ಬಿಡದೇ ಇರುವುದು ಇವೆಲ್ಲ ಕಾರಣಗಳು ರಾಜಿ ಸಂಧಾನದ ಮೂಲಕ ಕೂಡಾ ಇತ್ಯರ್ಥ ಮಾಡಲು ಹೋದರೂ ಸರಿಯಾಗದೇ ಇದ್ದಾಗ ಬೇರೆ ದಾರಿಯಿಲ್ಲದೇ ವೆಜಲ್ಪುರ ಪೊಲೀಸ್‌ ಠಾಣೆಯಲ್ಲಿ ಕಿರುಕುಳ ಆರೋಪದಡಿ ಗಂಡನ ವಿರುದ್ಧ ದೂರು ನೀಡಿದ್ದಾಳೆ.

Comments are closed.