Railway station: ದೆಹಲಿ ರೈಲು ನಿಲ್ದಾಣ ಕಾಲ್ತುಳಿತ ಪ್ರಕರಣ: 1 ತಿಂಗಳ ನಂತರ ನಿಲ್ದಾಣದಲ್ಲಿ ಭಾರಿ ಜನದಟ್ಟಣೆ

Railway station: ನವದೆಹಲಿ(New delhi) ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 18 ಜನರು ಸಾವನ್ನಪ್ಪಿದ ಒಂದು ತಿಂಗಳ ನಂತರ ಭಾನುವಾರ ರಾತ್ರಿ ಭಾರಿ ಜನದಟ್ಟಣೆ ಕಂಡುಬಂದಿದೆ. ಹಲವಾರು ರೈಲುಗಳ ವಿಳಂಬದಿಂದಾಗಿ ರಾತ್ರಿ 9 ಗಂಟೆಗೆ 12 ಮತ್ತು 13ನೇ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಕರ(Passengers) ದಟ್ಟಣೆ ಹೆಚ್ಚಿತ್ತು ಎಂದು ಪೊಲೀಸರು(Police) ಮತ್ತು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ಬ್ಯಾರಿಕೇಡ್‌ಗಳನ್ನು(Barricade) ಹತ್ತಿ, ಸರತಿ ಸಾಲುಗಳನ್ನು ತಪ್ಪಿಸಿ ತಮ್ಮ ಪ್ಲಾಟ್‌ಫಾರ್ಮ್ ಗಳನ್ನು ತಲುಪಿದರು ಎಂದು ವರದಿಗಳು ತಿಳಿಸಿವೆ.
ನವದೆಹಲಿ ರೈಲು ನಿಲ್ದಾಣದಲ್ಲಿ ನಿನ್ನೆ ರಾತ್ರಿ ಏನಾಯಿತು?
ಪ್ರಯಾಣಿಕರು ಬ್ಯಾರಿಕೇಡ್‌ಗಳನ್ನು ಹತ್ತಿ, ತಮ್ಮ ಪ್ಲಾಟ್‌ಫಾರ್ಮ್‌ಗಳನ್ನು ತಲುಪಲು ಸರತಿ ಸಾಲಿನಲ್ಲಿ ನಿಂತರು ಎಂದು ಪಿಟಿಐ ವರದಿ ಹೇಳಿದೆ. ಈ ಬೆಳವಣಿಗೆಯ ನಿಖರವಾದ ಸಮಯ ಸ್ಪಷ್ಟವಾಗಿಲ್ಲ.
ಜನಸಂದಣಿ ನಿಯಂತ್ರಣ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತಂದಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ನಾಲ್ಕು ರೈಲುಗಳ ನಿರ್ಗಮನ ವಿಳಂಬವಾಗಿದ್ದೇ ಇದಕ್ಕೆ ಕಾರಣ – ಶಿವಗಂಗಾ ಎಕ್ಸ್‌ಪ್ರೆಸ್ (ರಾತ್ರಿ 8.05 ಕ್ಕೆ ಹೊರಡಬೇಕಿತ್ತು), ಜಮ್ಮು ರಾಜಧಾನಿ ಎಕ್ಸ್‌ಪ್ರೆಸ್ (ರಾತ್ರಿ 9.25 ಕ್ಕೆ ಹೊರಡಬೇಕಿತ್ತು), ಲಕ್ನೋ ಮೇಲ್ (ರಾತ್ರಿ 10 ಗಂಟೆಗೆ ಹೊರಡಬೇಕಿತ್ತು) ಮತ್ತು ಮಗಧ ಎಕ್ಸ್‌ಪ್ರೆಸ್ (ರಾತ್ರಿ 9.05 ಕ್ಕೆ ಹೊರಡಬೇಕಿತ್ತು). ಈ ಎಲ್ಲಾ ನಾಲಕು ರೈಲುಗಳ ಜನ ಒಂದೇ ಬಾರಿಗೆ ರೈಲು ನಿಲ್ದಾಣದಲ್ಲಿ ಸೇರಿದ ಪರಿಣಾಮ ಈ ಜನ ಸಂದಣಿ ಉಂಟಾಗಿತ್ತು.
Comments are closed.