Railway: ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೆ ಯೋಜನೆ ಕುರಿತು ಕೇಂದ್ರದಿಂದ ಬಿಗ್ ಅಪ್ಡೇಟ್ !!

Railway : ಭಾರಿ ಚರ್ಚೆಗೆ ಕಾರಣವಾಗಿರುವ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೆ ಯೋಜನೆ ಕುರಿತು ಇದೀಗ ಕೇಂದ್ರ ಸರ್ಕಾರ ಹೊಸ ಅಪ್ಡೇಟ್ ನೀಡಿದ್ದು ಯೋಜನೆ ಜಾರಿಗೆ ಮುಂದಿನ ಹೆಜ್ಜೆ ಇಟ್ಟಿದೆ.
ಹೌದು, ಹಲವು ವರ್ಷಗಳ ಹಿಂದೆ ಶಿವಮೊಗ್ಗ-ಶೃಂಗೇರಿ-ಮಂಗಳೂರು( Shivamogga- Sringeri- Mangaluru)ಹೊಸ ರೈಲು ಮಾರ್ಗ ಯೋಜನೆಗೆ ಒಪ್ಪಿಗೆ ಸಿಕ್ಕಿತ್ತು. ಆದರೆ ಯಾವುದೇ ಪ್ರಕ್ರಿಯೆ ಮುಂದುವರೆದಿರಲಿಲ್ಲ. ಆದ್ದರಿಂದ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಯೋಜನೆಯ ಜಾರಿಗೆ ಮನವಿ ಸಲ್ಲಿಕೆ ಮಾಡಿದ್ದರು. ಅಂತಿಮವಾಗಿ ಕೇಂದ್ರ ಸರ್ಕಾರ ಈಗ ಈ ಯೋಜನೆ ಜಾರಿಗೆ ಮುಂದಿನ ಹೆಜ್ಜೆಯನ್ನು ಇಟ್ಟಿದೆ.
ಸಧ್ಯ ಅಂತಿಮ ಹಂತದ ಸಮೀಕ್ಷೆಗೆ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಯೋಜನೆ ಜಾರಿಯಾದರೆ ಮಲೆನಾಡು-ಕರಾವಳಿ ಕರ್ನಾಟಕದ ಸಂಪರ್ಕ ಸುಲಭವಾಗಲಿದೆ.
Comments are closed.