Public School: ಪೊನ್ನಂಪೇಟೆಯ ಸರ್ಕಾರಿ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿದ ಎ. ಎಸ್ ಪೂನ್ನಣ್ಣ

Public School: ಪೊನ್ನಂಪೇಟೆ(Ponnampete) ಕೆ.ಪಿ ಎಸ್ ಶಾಲೆಯ(KPS School) ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕರು ಹಾಗು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್ ಪೊನ್ನಣ್ಣ(MLA A S Ponnanna) ನರವರು ಇಂದು ಶಾಲಾ ಆವರಣದಲ್ಲಿ ನೆರವಿಸಿದರು. ಒಟ್ಟು 35 ಲಕ್ಷ ವೆಚ್ಚದ 2 ಶಾಲಾ ಕೊಠಡಿಗೆ ಹಣ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಇನ್ನು 3 ಶಾಲಾ ಕೊಠಡಿಗೆ ಹಣ ಬಿಡುಗಡೆ ಗೊಳುತ್ತಿದ್ದು ಸದ್ಯಸದಲ್ಲೇ ಅದರ ಕಾಮಗಾರಿ ಕೂಡ ಆರಂಭಿಸಾಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಉಪ ನಿರೀಕ್ಷಕರು ಇದೆ ಸಂದರ್ಭ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ. ಪಂ ಅದ್ಯಕ್ಷರಾದ ಅಣ್ಣೀರ ಹರೀಶ್ ಉಪಾಧ್ಯಕ್ಷರಾದ ರಶೀದ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎಸ್ಎಂಸಿ ಅಧ್ಯಕ್ಷರು ಸದಸ್ಯರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎಂ. ಎಸ್ ಕುಶಾಲಪ್ಪ, ಎಸ್. ಡಿ ಎಂ. ಸಿ ಅಧ್ಯಕ್ಷರಾದ ,ಜುನೖದ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಮಿತ ,ರಿಷಿಕಾ ಕೊಳೇರಭಾರತಿ, ರಾಮಕೃಷ್ಣ ಬಿ.ಇ ಒ ಆನಂದ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಜಿ ಅಚ್ಚುತನ್,ಶಾಲಾ ಮುಖ್ಯಪಾಧ್ಯಾರಾದ ವಿಜಯ ಶಾಲೆಯ ಶಿಕ್ಷಕರು , ಎಸ್ ಡಿ ಎಂ ಸಿ ಸದಸ್ಯರು, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಪಧಾದಿಕಾರಿಗಳು, ಮತ್ತಿತರು ಉಪಸ್ಥಿತರಿದ್ದರು.
Comments are closed.