Chamarajanagara: ತ್ರಿಬಲ್‌ ರೈಡಿಂಗ್‌ ವೇಳೆ ಬಿದ್ದವರ ಮೇಲೆ ಹರಿದ ವಾಹನ, ಇಬ್ಬರ ಸಾವು, ಓರ್ವ ಗಂಭೀರ!

Chamarajanagara: ತ್ರಿಬಲ್‌ ರೈಡಿಂಗ್‌ ವೇಳೆ ಆಯತಪ್ಪಿ ಬಿದ್ದ ಬೈಕ್‌ ಸವಾರರ ಮೇಲೆ ವಾಹನ ಹರಿದು ಇಬ್ಬರು ಸಾವಿಗೀಡಾದ ಘಟನೆ ನಡೆದಿದೆ. ಇದರಲ್ಲಿ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಚಾಮರಾಜನಗರ ತಾಲೂಕಿನ ಹರದನಹಳ್ಳಿ ಸಮೀಪ ಈ ಘಟನೆ ನಡೆದಿದ್ದು, ಅಭಿಷೇಕ್‌ (23), ಅಭಿ (21) ಮೃತಪಟ್ಟವರು. ಗಂಭೀರವಾಗಿ ಗಾಯಗೊಂಡ ಮಹಾದೇವನನ್ನು ಸಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚಾಮರಾಜನಗರ ಪೂರ್ವ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

Comments are closed.