Protein supplement: ಮಾರುಕಟ್ಟೆಯಲ್ಲಿ ಪ್ರೋಟೀನ್ ಸಪ್ಲಿಮೆಂಟ್ಸ್ – ಯಾವುದು ನಿಜ, ಯಾವುದು ಸುಳ್ಳು?

Protein supplement: ಭಾರತೀಯ ಆಹಾರದಲ್ಲಿ ಪ್ರೋಟೀನ್ ಮತ್ತು ಅದರ ಗುಣಮಟ್ಟ ಪೌಷ್ಟಿಕತಜ್ಞರಲ್ಲಿ(Food dietitian) ನಿರಂತರ ಚರ್ಚೆಯ ವಿಷಯವಾಗಿದೆ. ವಿವಿಧ ರುಚಿಗಳನ್ನು ಹೊಂದಿರುವ ಪ್ರೋಟೀನ್‌ನ ಸೂತ್ರಗಳು ಪ್ರೋಟೀನ್ ಪೂರಕಗಳಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ನಮ್ಮ ಆಹಾರದಲ್ಲಿ ಈ ಉತ್ಪನ್ನಗಳ ಅವಶ್ಯಕತೆ ಏನು? ಈ ಉತ್ಪನ್ನದಿಂದ ಪಡೆದ ಪ್ರೋಟೀನ್ ಯಾರಿಗಾದರೂ ಅತ್ಯಗತ್ಯವಿರುತ್ತದೆಯೆ?!

“ನೀವು ಏನು ಮಾಡಿದರೂ ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಇರುವುದಿಲ್ಲ.”
“ನಾನು ಮಾಂಸಾಹಾರಿ ನಾನು ಸಾಕಷ್ಟು ಪ್ರೋಟೀನ್ ಪಡೆಯುತ್ತೇನೆ”
“ಕೇವಲ ಪನೀರ್ ತಿನ್ನಿ. ಅದರಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತದೆ”
“ಕೇವಲ ಹಾಲು ಕುಡಿಯಿರಿ ಮತ್ತು ಕಾಳು ತಿನ್ನಿರಿ”
“ರೀ, ಬೇಳೆಕಾಳು ತಿಂದರೆ ಪ್ರೊಟೀನ್ ಸಿಗುತ್ತೆ, ರೀ.”
“ನೀವು ವ್ಯಾಯಾಮ ಮಾಡುತ್ತಿದ್ದರೆ, ನೀವು ಪ್ರೋಟೀನ್ ಪೂರಣ ತೆಗೆದುಕೊಳ್ಳಲೇಬೇಕು.”
“ಮೂಲತಃ ನಮಗೆ ಹೆಚ್ಚು ಪ್ರೋಟೀನ್ ಅಗತ್ಯವಿಲ್ಲ, ಇದು ಎಲ್ಲಾ ಒಂದು ರೀತಿಯ ಗೀಳು, ಅಷ್ಟೇ”
ಈ ರೀತಿಯ ವಿವಿಧ ಅಭಿಪ್ರಾಯಗಳನ್ನು ನೀವು ಅನೇಕ ಜನರಿಂದ ಕೇಳಿರುತ್ತೀರಿ.

ಇತ್ತೀಚೆಗೆ ಪರಿಚಯಿಸಿದ ಒಂದು ಸಂಶೋಧನೆಯ ಪ್ರಕಾರ, ಪ್ರೋಟೀನ್ ಅನ್ನು ಪುಡಿ ರೂಪದಲ್ಲಿ ಒದಗಿಸುವ 36 ಭಾರತೀಯ ಕಂಪನಿಗಳ ಉತ್ಪನ್ನಗಳು ಪದಾರ್ಥಗಳ ಪ್ರಮಾಣ ಮತ್ತು ಪ್ರೋಟೀನ್‌ನ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ್ದಾಗಿವೆ ಎಂದು ಸಾಬೀತಾಗಿದೆ. ಸುದ್ದಿ ಬಿಡುಗಡೆಯಾದ ಮರುದಿನ ಒಬ್ಬರಿಂದ ಕರೆ ಬಂತು.

“ಹಾಗಾದರೆ ನಾನು ಈಗ ಇದನ್ನು ನಿಲ್ಲಿಸಬೇಕೆ? ಯಾರೋ ನಮ್ಮ ಕಚೇರಿಗೆ ಪ್ಯಾಕೆಟ್‌ಗಳನ್ನು ತಂದರು ಮತ್ತು ನಾವು ಕಳೆದ ವರ್ಷದಿಂದ ಇದನ್ನು ತಿನ್ನುತ್ತಿದ್ದೇವೆ. ಏಕೆಂದರೆ, ಇದು ನೈಸರ್ಗಿಕವಾಗಿದೆ.” ಅವರನ್ನು ಸಮಾಧಾನಪಡಿಸಿ ನಾನು ಹೇಳಿದೆ – “ಆದರೆ ಮಾಂಸಾಹಾರಿಯಾಗಿರುವ ನಿಮಗೆ ಈ ಪುಡಿ ಏಕೆ ಬೇಕು?”
“ಹೌದು…. ಆದರೆ, ಇದು ನೈಸರ್ಗಿಕ ಘಟಕಗಳನ್ನು ಹೊಂದಿದೆ, ಇದನ್ನು ಬಳಸುವುದರಿಂದ ಅನೇಕ ರೋಗಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ. ಈಗ ಇಂತಹ ಉತ್ಪಾದನೆಗಳನ್ನು ಚೆನ್ನಾಗಿಲ್ಲ ಎಂದು ಘೋಷಿಸಿದರೆ ಏನು ಮಾಡುವುದು?”

ಅವರು ತನ್ನ ಆಹಾರದ ಸಮತೋಲನವನ್ನು ಮತ್ತು ನೈಸರ್ಗಿಕವಾಗಿ ಸೇವಿಸುವ ಪ್ರೋಟೀನ್ ಪೌಡರ್ಗಳ ಬಗ್ಗೆ ತಿಳಿಸಿದರು ಮತ್ತು ನನ್ನ ತಲೆಯಲ್ಲಿ ನೈಸರ್ಗಿಕ, ಗಿಡಮೂಲಿಕೆ, ಪ್ರಾಕೃತಿಕ, ಇತ್ಯಾದಿ ಹೆಸರುಗಳೊಂದಿಗೆ ಭಾರತೀಯರ ಮೇಲೆ ಹೇರಲಾದ ಆರೋಗ್ಯಕರ ಪುಡಿಗಳು, ಮಾತ್ರೆಗಳು, ಪಾನೀಯಗಳು, ಈ ಬಗ್ಗೆ ಆಲೋಚನೆಗಳ ಸರಪಣಿ ಆರಂಭವಾಯಿತು. ಹೆಚ್ಚಿನ ತಿಳುವಳಿಕೆಗಳೆಲ್ಲಾ ವ್ಯಾಪಾರಿಕರಣದ ಪ್ರಕಾರಗಳು! ಕೆಲವನ್ನು ಮಾತ್ರ ಹೊರತುಪಡಿಸಿ 90% ರಷ್ಟು ಇಂಥ ಉತ್ಪಾದನೆಗಳು ಹೇಳಿಕೊಂಡಷ್ಟು ಉತ್ತಮ ಗುಣಮಟ್ಟ ಹೊಂದಿರುವುದಿಲ್ಲ. ಅದರಲ್ಲಿ ಎಷ್ಟು ಉತ್ಪಾದನೆಗಳಲ್ಲಿ ಕಲಬೆರಕೆ ಕೂಡ ಇರುತ್ತದೆ.

ನಮ್ಮ ಆಹಾರದಲ್ಲಿ ಪ್ರೋಟೀನ್ಗಳ ಅಗತ್ಯ ಇದೆಯೆ…?
ಹೌದು, ಪ್ರೋಟೀನ್ ಆಹಾರದ ಒಂದು ಮಹತ್ವದ ಮತ್ತು ಅಗತ್ಯದ ಪ್ರಮುಖ ಘಟಕವಾಗಿದೆ. ಪ್ರೋಟೀನ್ ರಹಿತ ಆಹಾರದಿಂದ ನಾವು ಹೆಚ್ಚು ಕಾಲ ಆರೋಗ್ಯದಿಂದ ಬದುಕಲು ಸಾಧ್ಯವಿಲ್ಲ. ಆದರೆ, ಪ್ರೋಟಿನ್ ಅನ್ನು ಎಷ್ಟು ಸೇವಿಸಬೇಕು ಎಂಬುದಕ್ಕೆ ಪ್ರಮಾಣವಿದೆ. ಅದನ್ನು ಸಿಕ್ಕಾಪಟ್ಟೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ತಪ್ಪು.

1) ಸರಾಸರಿ ವ್ಯಕ್ತಿಗೆ 1 ಕೆಜಿ ದೇಹದ ತೂಕಕ್ಕೆ ಒಂದು ಗ್ರಾಂ ಗಿಂತ ಕಡಿಮೆ ಪ್ರೋಟೀನ್ ಸಾಕು.
2) ಅತಿ ಹೆಚ್ಚು ದೈಹಿಕ ಪರಿಶ್ರಮ ಮಾಡುವವರಿಗೆ ಇದರ ಎರಡು ಪಟ್ಟು ಪ್ರೋಟೀನ್ ಬೇಕಾಗುತ್ತದೆ.
3) ಮಾಂಸಹಾರಿಗಳಿಗಿಂತಲೂ ಸಸ್ಯಹಾರಿಗಳಿಗೆ ಪ್ರೋಟೀನ್ ಕೊರತೆ ಉಂಟಾಗುವ ಸಾಧ್ಯತೆ ಇದೆ.
4) ಆಹಾರದಲ್ಲಿ ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್ ಆಹಾರವನ್ನು ಸೇರಿಸಿದರೆ, ಇತರ ಪ್ರೋಟೀನ್ ಪೌಡರ್ಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ.

ಭಾರತೀಯ ಆಹಾರದಲ್ಲಿ ಪ್ರೋಟೀನ್ ಕೊರತೆ ಇದೆಯೇ…?
ಮಾಂಸಾಹಾರಿಗಳು ತಮ್ಮ ಆಹಾರದಿಂದ ಸಾಕಷ್ಟು ಪ್ರಮಾಣದ ಪ್ರೋಟೀನ್ ಅನ್ನು ಪಡೆಯಬಹುದು, ಆದರೆ, ಸಸ್ಯಾಹಾರಿಗಳಿಗೆ ಕೆಲವೊಮ್ಮೆ ಪ್ರೋಟೀನ್ ಕೊರತೆ ಉಂಟಾಗಬಹುದು. (ಆದರೆ, ಇದಕ್ಕೆ ತಪ್ಪು ಆಹಾರ ಪದ್ಧತಿಯೇ ಪ್ರಮುಖ ಕಾರಣವಾಗಿರುತ್ತದೆ!) ಇದನ್ನೆಲ್ಲ ಪರಿಗಣಿಸಿ ಮಾರುಕಟ್ಟೆಯಲ್ಲಿ ಸಿಗುವ ಪ್ರೊಟೀನ್ ಪೌಡರ್ ಗಳ ಬಗ್ಗೆ ಮಾತನಾಡುವಾಗ ಪೌಷ್ಟಿಕತಜ್ಞರನ್ನು ಸಂಪರ್ಕಿಸಿದ ನಂತರವೇ ಪ್ರೊಟೀನ್ ಪೌಡರ್ ಖರೀದಿಸುವುದು ಮುಖ್ಯ.

ನೀವು ನೈಸರ್ಗಿಕ ಅಥವಾ ಗಿಡಮೂಲಿಕೆ ಎಂದು ಲೇಬಲ್ ಮಾಡಿದ ಪ್ರೋಟೀನ್ ಪೌಡರ್ ಅನ್ನು ಕೊಂಡು ತಂದಾಗ, ಪೌಷ್ಟಿಕತಜ್ಞರು ಈ ರೀತಿಯ ಪುಡಿಯನ್ನು ತೆಗೆದುಕೊಳ್ಳದಂತೆ ಒತ್ತಾಯದ ಸಲಹೆ ನೀಡುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಗಿಡಮೂಲಿಕೆಗಳು ಮತ್ತು ನೈಸರ್ಗಿಕ ಪದಾರ್ಥಗಳು ಹೆಚ್ಚಾಗಿ ಶಿಲೀಂಧ್ರಗಳ ಸೋಂಕು ಅಥವಾ ಅಂತಹ ಪ್ರೋಟೀನ್ಗಳನ್ನು ಉಂಟುಮಾಡುತ್ತವೆ. ಇವುಗಳು ನಿಮ್ಮ ಆಹಾರದಲ್ಲಿ ದೀರ್ಘಕಾಲದವರೆಗೆ ಇದ್ದರೆ, ಕರುಳಿನ ಆರೋಗ್ಯವೂ ಹದಗೆಡುವ ಸಾಧ್ಯತೆಯಿದೆ. ಉತ್ಪನ್ನಗಳಲ್ಲಿ ಪ್ರೋಟೀನ್ ಪ್ರಮಾಣವು ಕಡಿಮೆಯಾಗಿದೆ ಯಾವುದೇ ಪ್ರೊಟೀನ್ ಪೌಡರ್ ಅನ್ನು ಆಹಾರದಲ್ಲಿ ಸೇರಿಸುವಾಗ, ಅದರಲ್ಲಿ ಬಳಸಿರುವ ಕಚ್ಚಾ ಸಾಮಗ್ರಿಗಳ ಮೂಲ ಮತ್ತು ಅದರ ಮೇಲೆ ಮಾಡಿದ ಸಂಸ್ಕರಣೆಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಅನೇಕ ಪ್ರೋಟೀನ್ ಪುಡಿಗಳು ಆರರಿಂದ ಏಳು ಗ್ರಾಂ ಪ್ರೋಟೀನ್ ಅನ್ನು ಮಾತ್ರ ಹೊಂದಿರುತ್ತವೆ. ಆದ್ದರಿಂದ, ಪ್ರೋಟೀನ್ ಪೌಡರ್ ಅನ್ನು ಆಯ್ಕೆಮಾಡುವಾಗ ಕೆಲವು ವಿಷಯಗಳು ಮುಖ್ಯವಾಗುತ್ತವೆ. ಕೆಲವು ಪ್ರೊಟೀನ್ ಪೌಡರ್ಗಳಲ್ಲಿ ಕಡಲೆಕಾಯಿ ಸಿಪ್ಪೆ ಪುಡಿ, ಹೊಟ್ಟು, ಕ್ರಿಮಿಕೀಟಗಳಿಂದ ತಯಾರಿಸಿದ ಪುಡಿ, ಸ್ಟಿರಾಯ್ಡ್, ಇತ್ಯಾದಿಗಳನ್ನು ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ. ಆದ್ದರಿಂದ, ಇಂಥ ಕೃತ್ರಿಮ ಆಹಾರಗಳ ವ್ಯಾಮೋಹವನ್ನು ತ್ಯಜಿಸುವುದೇ ಒಳ್ಳೆಯದು.

ಡಾ. ಪ್ರ. ಅ. ಕುಲಕರ್ಣಿ

Comments are closed.