Actor Darshan: ಶತ್ರು ಸಂಹಾರ ಪೂಜೆ ಮಾಡಿದ ದರ್ಶನ್ ಜೊತೆ ಮತ್ತೋರ್ವ ಕೊಲೆ ಆರೋಪಿ ಸಾಥ್!

Mangaluru: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಕೇರಳದ ಕಣ್ಣೂರಿನ ಪ್ರಸಿದ್ಧ ಕ್ಷೇತ್ರ ಮಾಡಾಯಿಕಾವು ಶ್ರೀ ಭಗವತಿ ದೇವಸ್ಥಾನಕ್ಕೆ ತನ್ನ ಕುಟುಂಬ ಸಮೇತರಾಗಿ ಭೇಟಿ ನೀಡಿ ಶತ್ರು ಸಂಹಾರ ಯಾಗ ಮಾಡಿದ್ದಾರೆ.
ಪುತ್ತೂರು ಸ್ನೇಹಿತರ ಮಾರ್ಗದರ್ಶನದಿಂದ ದರ್ಶನ್ ಶತ್ರು ಸಂಹಾರ ಪೂಜೆ ಮಾಡಿದ್ದು, ಇವರೊಂದಿಗೆ ಕೊಲೆ ಆರೋಪಿ ಪ್ರಜ್ವಲ್ ರೈ ಕಾಣಿಸಿಕೊಂಡಿರುವ ಕುರಿತು ವರದಿಯಾಗಿದೆ. 2017ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕರೋಪಾಡಿ ಜಲೀಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೈ ಬಂಧಿತನಾಗಿದ್ದ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಶತ್ರು ಸಂಹಾರ ಪೂಜೆ ಮಾಡುವಾಗ ಇನ್ನೋರ್ವ ಕೊಲೆ ಆರೋಪಿ ಪ್ರಜ್ವಲ್ ರೈ ಕೂಡಾ ಕಾಣಿಸಿಕೊಂಡಿರುವ ಕುರಿತು ಭಾರೀ ಚರ್ಚೆ ಪ್ರಾರಂಭವಾಗಿದೆ ಎನ್ನಲಾಗಿದೆ.
Comments are closed.