UP: ಕಲ್ಲು, ಇಟ್ಟಿಗೆಯಿಂದ ಜಜ್ಜಿ ಕೋಳಿ ಕೊಂದಿದ್ದಕ್ಕೆ ಇಬ್ಬರ ವಿರುದ್ಧ ಬಿತ್ತು ಕೇಸ್!!

 

UP: ಕೋಳಿಯನ್ನು ಕಲ್ಲು ಮತ್ತೆ ಇಟ್ಟಿಗೆಯಿಂದ ಜಜ್ಜಿ ಕೊಂದಿದ್ದಕ್ಕೆ ಪ್ರತಿಭಟನೆ ನಡೆಸಿದ ಮಾಲಕರನ್ನು ಹಿಡಿದು ತಳಿಸಿದ ಆರೋಪದಡಿ ಇಬ್ಬರ ವಿರುದ್ಧ  ದಾಖಲಾಗಿದೆ.

 

ಉತ್ತರ ಪ್ರದೇಶ ಬಲ್ಲಿಯಾ ಜಿಲ್ಲೆಯ ಪಕ್ಡಿ ಪ್ರದೇಶದಲ್ಲಿ ಭೂ ವಿವಾದದ ಗಲಾಟೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

 

ಕೋಳಿಯ ಮಾಲೀಕರಾದ ಆರತಿ ದೇವಿ ಅವರು ಕೋಳಿಯನ್ನು ಕೊಂದ ಬಗ್ಗೆ ಆರೋಪಿಗಳಿಂದ ವಿವರಣೆ ಕೇಳಿದಾಗ, ಅವರು ಆಕೆಯನ್ನು ಸಹ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

 

ಆರತಿ ದೇವಿ ಅವರ ದೂರಿನ ಆಧಾರದ ಮೇಲೆ, ಸೂರಜ್ ರಾಮ್ ಮತ್ತು ಶೀಲಾ ದೇವಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 325 (ಪ್ರಾಣಿಯನ್ನು ಕೊಲ್ಲುವುದು), 115-2 (ಉದ್ದೇಶಪೂರ್ವಕವಾಗಿ ನೋವುಂಟು ಮಾಡುವುದು), 352 (ಶಾಂತಿ ಕದಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಮತ್ತು 351-3 (ಯಾವುದೇ ವ್ಯಕ್ತಿಗೆ ಕೊಲ್ಲುವ ಅಥವಾ ಗಂಭೀರ ಹಾನಿ ಉಂಟುಮಾಡುವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Comments are closed.