Jamakhandi: ಹಣ ವಂಚನೆ ಆರೋಪ – ದೊಡ್ಡ ದೊಡ್ಡ ಭವಿಷ್ಯ ನುಡಿಯುತ್ತಿದ್ದ ಬಬಲಾದಿ ಮಠದ ಸ್ವಾಮೀಜಿ ಅರೆಸ್ಟ್!!

 

Jamakhandi: ಹಣಕಾಸಿನ ಅವ್ಯವಹಾರ (Financial Mismanagement)  ಆರೋಪದಡಿಯಲ್ಲಿ ರಾಜ್ಯದ ಪ್ರಸಿದ್ಧ ಮಠಗಳಲ್ಲಿ ಒಂದಾಗಿರುವ, ದೊಡ್ಡ ದೊಡ್ಡ ವಿಚಾರಗಳ ಕುರಿತು ಭವಿಷ್ಯ ನೋಡುತ್ತಿದ್ದ ಜಮಖಂಡಿಯ ಹೊಸ ಬಬಲಾದಿ ಮಠದ (Babaladi Mutt)  ಸದಾಶಿವ ಮುತ್ಯಾರನ್ನು (Sadashiv hirematha Mutya) ಸಿಐಡಿ (CID) ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಹೌದು, ಬೆಳಗಾವಿಯ ಗೋಕಾಕ್ ನ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್​​​ನಲ್ಲಿದ್ದ ಗ್ರಾಹಕರ ಹಣವನ್ನು ವಂಚಿಸಿದ ಆರೋಪದಡಿ ಈ ಸ್ವಾಮೀಜಿಯವರನ್ನು ಬಂಧಿಸಲಾಗಿದೆ. ಶ್ರೀಗಳಿಗೆ ಬ್ಯಾಂಕ್ ನಿಂದ ಕೆಲ ಅಧಿಕಾರಿಗಳೇ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದು, ಆ ಹಣದಲ್ಲಿ ಸ್ವಾಮೀಜಿ ಮನೆ ಕೂಡ ಕಟ್ಟಿಸಿಕೊಂಡಿದ್ದಾರೆಂಬ ಆರೋಪವಿದ್ದು ದೊರೆತ ಮಾಹಿತಿ ಪ್ರಕಾರ ಬರೋಬ್ಬರಿ 60 ಲಕ್ಷ ವಂಚನೆ ನಡೆಸಲಾಗಿದೆ ಎನ್ನಲಾಗಿದೆ.

 

ಇನ್ನೂ ಸದಾಶಿವ ಸ್ವಾಮೀಜಿ ಅವರನ್ನು ಶಹರ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದ್ದು, ಇನ್ನೇನು ಸ್ವಾಮೀಜಿ ಅವರನ್ನು ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಅಂದಹಾಗೆ ಮುತ್ಯಾ ಅವರು ಇತ್ತೀಚೆಗೆ ಕೆಲವು ವರ್ಷಗಳಿಂದ ಕಾಲಜ್ಞಾನ ಹೇಳುತ್ತಾ ಬಂದಿದ್ದು, ಭಕ್ತರು ಕೂಡ ಅವರು ಹೇಳುವ ಕಾಲಜ್ಞಾನ ನಿಜವಾಗುತ್ತೆ ಎಂದು ನಂಬಿದ್ದಾರೆ.

Comments are closed.