Bengaluru: ಸದನದಲ್ಲಿ ಕ್ರಾಂತಿ! 18 ಬಿಜೆಪಿ ಶಾಸಕರು 6 ತಿಂಗಳು ಅಮಾನತು..!

Share the Article

Bengaluru: ವಿಧಾನಸಭಾ ಅಧಿವೇಶನದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಮಂಡಿಸಿರುವ ಬಜೆಟ್ ಅಂಗೀಕಾರಗೊಂಡ ಈ ವೇಳೆ ಕೆಲವು ಬಿ ಜೆ ಪಿ ಸದಸ್ಯರು ಬಜೆಟ್ ನಲ್ಲಿ ಸೇರಿರುವ ಕೆಲವೊಂದು ವಿಚಾರಗಳನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಸದನದ ಬಾವಿಗೆ ಇಳಿದು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ಸ್ಪೀಕರ್ ಖಾದರ್ ಮೇಲೆ ವಿಪಕ್ಷ ಸದಸ್ಯರು ಪೇಪರ್ ಗಳನ್ನು ಹರಿದು ಎಸೆದು ರಂಪ ರಾಮಾಯಣ ಮಾಡಿದ್ದಾರೆ.

 

ವಿಧಾನಸಭೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆ ಕರಾವಳಿಯ ಮೂವರು ಸೇರಿದಂತೆ ಒಟ್ಟು ಹದಿನೆಂಟು ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಖಾದರ್ ಆದೇಶ ಹೊರಡಿಸಿದ್ದಾರೆ.

Comments are closed.