Rain: ಬೆಂಗಳೂರಿನಲ್ಲಿ ತಂಪೆರೆದ ವರುಣ : ಭಾರಿ ಗುಡುಗು, ಸಿಡಲು ಹಾಗೂ ಆಲಿಕಲ್ಲು ಸಹಿತ ಮಳೆ

Rain: ಬಿಸಿಲಿಗೆ ಕಾದು ಕೆಂಪಗಾಗಿದ್ದ ಸಿಲಿಕಾನ್ ಸಿಟಿಯಲ್ಲಿ(Silicon City) ಭಾರೀ ಮಳೆಯಾಗುತ್ತಿದೆ.(Heavy rain). ಅರ್ಧ ಗಂಟೆಯಿಂದ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಹೆಬ್ಬಾಳ, ಬ್ಯಾಟರಾಯನಪುರ, ಯಲಹಂಕ, ಕೆಂಪೇಗೌಡ ವಿಮಾನ ನಿಲ್ದಾಣದ(Airport) ಕಡೆ ಭಾರಿ ಮಳೆಯಾಗುತ್ತಿದೆ.
ಭಾರೀ ಗುಡುಗು, ಸಿಡಿಲು ಮಳೆಗೆ ವಿಮಾನ ಹಾರಾಟದಲ್ಲಿ ವಿಳಂಬವಾದ ಹಿನ್ನೆಲೆ ಪ್ರಯಾಣಿಕರು ಪರದಾಡುವಂತಾಗಿದೆ. ಒಂದು ವಾರದಲ್ಲಿ ವೆಂಗಳೂರಿನಲ್ಲಿ 38 ಡಿಗ್ರಿ ತಾಪಮಾನ ದಾಖಲಾಗಿತ್ತು. ಬೆಂಗಳೂರಿನ ನಾಗರೀಕರು ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದರು. ಆದರೆ ಇಂದು ಬೆಂಗಳೂರಿನಲ್ಲಿ ಭಾರಿ ಮಳೆ ಆಗುತ್ತಿರುವ ಪರಿಣಾಮ ತಕ್ಕ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಮಳೆ ಮಾತ್ರವಲ್ಲದೆ ಅಲ್ಲಲ್ಲಿ ಆಲಿಕಲ್ಲು ಮಳೆಯಾಗುತ್ತಿದ್ದು, ಜನ ಆಶ್ಚರ್ಯಗೊಂಡಿದ್ದಾರೆ. ಮಳೆಯ ನಿರೀಕ್ಷೆತಲ್ಲಿಲ್ಲದ ಬೆಂಗಳೂರಿಗರು ಕಚೇರಿ ಬಿಟ್ಟು ಮನೆ ತೆರಳಲು ಪರದಾಡುವಂತ ಪರಿಸ್ಥಿತಿ ಎದುರಾಗಿದೆ.
Comments are closed.