Online Money Gaming: ಆನ್‌ಲೈನ್‌ ಬೆಟ್ಟಿಂಗ್‌ ಜಾಲತಾಣಗಳನ್ನು ನಿರ್ಬಂಧನೆ ಮಾಡಿದ ಕೇಂದ್ರ

Share the Article

Online Money Gaming: ಕೇಂದ್ರ ಸರಕಾರ ತೆರಿಗೆ ವಂಚನೆ ಆರೋಪದಲ್ಲಿ 357 ಬೆಟ್ಟಿಂಗ್‌ ಸೈಟ್‌ಗಳನ್ನು ಬ್ಲಾಕ್‌ ಮಾಡಿದೆ. ಇಂತಹ ವೆಬ್‌ಸೈಟ್‌ ಕಂಪನಿಗಳಿಗೆ ಸೇರಿದ ಸುಮಾರು 2400 ಖಾತೆಯಿಂದ ಹಣ ಮುಟ್ಟುಗೋಲು ಹಾಕಿದೆ.

ತೆರಿಗೆ ವಂಚನೆ ಮಾಡುತ್ತಿರುವ ಆನ್‌ಲೈನ್‌ ಗೇಮಿಂಗ್‌ ವೆಬ್‌ಸೈಟ್‌ಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ ಕಠಿಣ ಕ್ರಮ ತೆಗೆದುಕೊಂಡಿದೆ. 700 ವಿದೇಶಿ ಸಂಸ್ಥೆಗಳನ್ನು ಡಿಜಿಜಿಐ ಅಧಿಕಾರಿಗಳು ಪತ್ತೆ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ. 2000ನೇ ಐಟಿ ಕಾಯ್ದೆಯ ಸೆಕ್ಷನ್‌ 69 ರ ಅಡಿಯಲ್ಲಿ ನಿರ್ಬಂಧನೆ ಮಾಡಲಾಗಿರುವ ಕುರಿತು ಹಣಕಾಸು ಸಚಿವಾಲಯ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.

Comments are closed.