Crime: ಮೂಡುಬಿದಿರೆ: ಹಿಂದು ಮುಖಂಡನ ಮನೆಯಿಂದಲೇ ದನ ಕಳ್ಳತನ: ಪ್ರತಿಭಟನೆಯ ಎಚ್ಚರಿಕೆ

Share the Article

Crime: ಮೂಡಬಿದಿರೆಯ ಬೆಳುವಾಯಿ ಹಿಂದು ಮುಖಂಡರಾದ ಸೋಮನಾಥ್ ಕೋಟ್ಯಾನ್ ರವರ ಮನೆಯ ಹಟ್ಟಿಯಿಂದಲೇ ದನ ಕಳ್ಳತನ ಮಾಡಿದ ಪ್ರಕರಣ ನಡೆದಿದ್ದು ಇದೊಂದು ಗಂಭೀರ ಪ್ರಕರಣವಾಗಿದ್ದು ಇದನ್ನು ಹಿಂದೂ ಜಾಗರಣ ವೇದಿಕೆ ಮೂಡಬಿದ್ರೆ ತಾಲೂಕು ತೀವ್ರವಾಗಿ ಖಂಡಿಸುತ್ತದೆ.

 

 ಕಳೆದ ಕೆಲವು ತಿಂಗಳುಗಳಿಂದ ದನ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು ಈ ಬಗ್ಗೆ ಸಂಬಂಧ ಪಟ್ಟ ಪೋಲಿಸ್ ಇಲಾಖೆ ಕೂಡಲೇ ದನ ಕಳ್ಳರನ್ನು ಹಿಡಿಯಬೇಕು ಹಾಗೂ ಅವರ ಮೇಲೆ ದರೋಡೆ ಕೇಸ್ ಅನ್ನ ದಾಖಲಿಸಬೇಕು ಇಲ್ಲವಾದಲ್ಲಿ ಸಮಾಜವೇ ಇದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದೆ, ಇದರಿಂದಾಗಿ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಕೋಮು ಗಲಭೆಗಳು ನಡೆದರೆ ನೇರ ಸಂಬಂಧ ಪಟ್ಟ ಪೋಲಿಸ್ ಇಲಾಖೆ ಅಧಿಕಾರಿಗಳು ಕಾರಣ ವಾಗುತ್ತದೆ, ಎಂದು ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಎಚ್ಚರಿಸಿದ್ದಾರೆ.

Comments are closed.