Missing woman: ಕೊಲೆಯಾಗಿದ್ದ ಮಹಿಳೆ ಮನೆಗೆ ವಾಪಾಸ್: ಈ ಪ್ರಕರಣದಲ್ಲಿ ಶಿಕ್ಷೆಯಾಗಿರುವ ನಾಲ್ವರ ಕಥೆ ಏನು?

Missing woman: ಮಧ್ಯಪ್ರದೇಶದ(MP), 35 ವರ್ಷದ ಲಲಿತಾ ಬಾಯಿ ಎಂಬ ಮಹಿಳೆ ಸೆಪ್ಟೆಂಬರ್ 2023 ರಲ್ಲಿ ಮಂದ್ಸೌರ್‌ನ ಗಾಂಧಿ ಸಾಗರ್ ಪ್ರದೇಶದಿಂದ ನಾಪತ್ತೆಯಾಗಿದ್ದರು, ನಂತರ ಮಧ್ಯಪ್ರದೇಶದ ಝಬುವಾದ ಥಾಂಡ್ಲಾ ಪಟ್ಟಣದಲ್ಲಿ ಅವರ “ಕೊಲೆ”(Murder) ಪ್ರಕರಣ ದಾಖಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಆದರೆ 2023ರಲ್ಲಿಯೇ ಸತ್ತಿದ್ದಾರೆಂದು ಭಾವಿಸಲಾಗಿದ್ದ ಮಹಿಳೆ ತಮ್ಮ ಮನೆಗೆ ವಾಪಾಗಿದ್ದಾರೆ. ಆದರೆ ಆಶ್ಚರ್ಯವೇನೆಂದರೆ ಆಕೆಯನ್ನು ‘ಕೊಲೆ’ ಮಾಡಿದ ಆರೋಪ ಹೊತ್ತಿದ್ದ ನಾಲ್ವರು ವ್ಯಕ್ತಿಗಳು ಈಗಾಗಲೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಮಹಿಳೆಯ ಕುಟುಂಬವು ಕೊಳೆತ ಶವವನ್ನು ಆಕೆಯದು ಎಂದು ಗುರುತಿಸಿ, ಆಕೆ ಆ 4 ಪುರುಷರಲ್ಲಿ ಒಬ್ಬರೊಂದಿಗೆ ಓಡಿಹೋಗಿದ್ದಾಳೆ ಎಂದು ಹೇಳಿದ್ದಾಗಿ ಪೊಲೀಸ್ ಅಧಿಕಾರಿ ಹೇಳಿಕೆಯನ್ನು ವರದಿ ಮಾಡಲಾಗಿದೆ. ಮಹಿಳೆಯ ಕುಟುಂಬವು ಶವದ ಅಂತ್ಯಸಂಸ್ಕಾರವನ್ನೂ ಮಾಡಿತ್ತು. ಲಲಿತಾ ಬಾಯಿ ಅವರ ಸಂಬಂಧಿಕರು ತಲೆ ಪುಡಿಪುಡಿಯಾದ ಮಹಿಳೆಯ ಶವವನ್ನು ನೋಡಿ, ಹಾಗೂ
ಆಕೆಯ ಕೈಯಲ್ಲಿದ್ದ ಹಚ್ಚೆ ನೋಡಿ ದೇಹವನ್ನು ಗುರುತಿಸಿದ್ದರು ಎಂದು ಗಾಂಧಿ ಸಾಗರ್ ಪೊಲೀಸ್ ಠಾಣೆಯ ಉಸ್ತುವಾರಿ ತರುಣ ಭಾರದ್ವಾಜ್ ಉಲ್ಲೇಖಿಸಿದ್ದಾರೆ.

“ನಾವು ಕಾಣೆಯಾದ ವ್ಯಕ್ತಿಯ ದೂರು ಸಲ್ಲಿಸಿದ ನಂತರ, ಥಾಂಡ್ಲಾ ಪೊಲೀಸರು ತಲೆ ಪುಡಿಪುಡಿಯಾದ ಮಹಿಳೆಯ ಶವ ಪತ್ತೆಯಾಗಿದೆ ಎಂದು ನಮಗೆ ಮಾಹಿತಿ ನೀಡಿದರು. ನಾವು ಅಲ್ಲಿಗೆ ಹೋಗಿ ಹಚ್ಚೆ ಮತ್ತು ಕಾಲಿಗೆ ಕಟ್ಟಲಾಗಿದ್ದ ಕಪ್ಪು ದಾರದ ಆಧಾರದ ಮೇಲೆ ಅದು ನಮ್ಮ ಮಗಳ ಶವ ಎಂದು ಗುರುತಿಸಿದೆವು. ನಾವು ಅಂತ್ಯಕ್ರಿಯೆಯನ್ನೂ ನಡೆಸಿದ್ದೇವೆ” ಎಂದು ಲಲಿತಾ ಅವರ ತಂದೆ ನನುರಾಮ್ ಬಂಚಡಾ ಹೇಳಿದರು.

ಲಲಿತಾ ಬಾಯಿ ಕಾಣೆಯಾದದ್ದು ಹೇಗೆ?

ನವಲಿ ಗ್ರಾಮದ ನಿವಾಸಿ ಲಲಿತಾ ಬಾಯಿ (35) ಅವರು ಶಾರುಖ್ ಎಂಬ ವ್ಯಕ್ತಿಯೊಂದಿಗೆ ಮನೆ ಬಿಟ್ಟು ಭಾನ್ಪುರಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ಶಾರುಖ್ ತನಗೆ ಗೊತ್ತಾಗದಿದ್ದಾಗೆ ₹5 ಲಕ್ಷಕ್ಕೆ
ಇನ್ನೊಬ್ಬ ವ್ಯಕ್ತಿಗೆ ‘ಮಾರಾಟ’ ಮಾಡಿದ್ದ ಎಂದು ಹೇಳಿದ್ದಾರೆ.

ಎರಡನೇ ವ್ಯಕ್ತಿ ತನ್ನನ್ನು ರಾಜಸ್ಥಾನದ ಕೋಟಾಗೆ ಕರೆದೊಯ್ದರು, ಅಲ್ಲಿ ಅವರು ಸುಮಾರು 18 ತಿಂಗಳುಗಳ ಕಾಲ ಅವನೊಂದಿಗೆ ಇರಿಸಿಕೊಂಡಿದ್ದ ಎಂದು ಲಲಿತಾ ಬಾಯಿ ಆರೋಪಿಸಿದ್ದಾರೆ. “ಆದಾಗ್ಯೂ, ನನಗೆ ಅವಕಾಶ ಸಿಕ್ಕ ತಕ್ಷಣ, ನಾನು ತಪ್ಪಿಸಿಕೊಂಡು ಹಿಂತಿರುಗಿದ್ದೇನೆ, ನನ್ನ ಬಳಿ ಮೊಬೈಲ್ ಫೋನ್ ಇಲ್ಲ, ಆದ್ದರಿಂದ ನನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ” ಎಂದು ಲಲಿತಾ ಬಾಯಿ ಹೇಳಿದ್ದಾರೆ.

Comments are closed.