Mandya: ಮಂಡ್ಯದಲ್ಲಿ ಭೀಕರ ಘಟನೆ; ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ ʼಎಎಸ್‌ಐʼ ಮಗಳು !

Mandya: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಎಎಸ್‌ಐ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಮಂಡ್ಯದಲ್ಲಿ  ಘಟನೆ ನಡೆದಿದೆ.

ಬಂದೀಗೌಡ ಬಡಾವಣೆ ಸಮೀಪ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿ ಸುಹಾನಾ (19) ಎಂದು ಗುರುತಿಸಲಾಗಿದೆ.

ಮಂಡ್ಯದ ಸಶಸ್ತ್ರ ಮೀಸಲು ಪಡೆಯ ಎಎಸ್‌ಐ ಅನ್ಸ್ರಪಾಷಾ ಅಅವರ ಮಗಳು. ಮೈಸೂರಿನಲ್ಲಿ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ಸುಹಾನಾ ಕಾಲೇಜು ಮುಗಿಸಿ ಮನೆ ಬಂದು ಬಂದೀಗೌಡ ಬಡಾವಣೆ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಸುಸೈಡ್‌ ಮಾಡಿದ್ದಾಳೆ.

ಆತ್ಮಹತ್ಯೆಗೆ ನಿಖರ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ.

Comments are closed.