Madikeri: ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರನಿಗೆ ಬಿತ್ತು ರೂ.18500 ದಂಡ!

Madikeri: ಕೊಡಗಿನ ಸೋಮವಾರ ಪೇಟೆ ಪಟ್ಟಣದಲ್ಲಿ ಬೈಕ್ ಸವಾರನೋರ್ವನಿಗೆ ಪೊಲೀಸರು ಬರೋಬ್ಬರಿ ರೂ.18500 ದಂಡ ವಿಧಿಸಿರುವ ಘಟನೆ ನಡೆದಿದೆ.
ಹುಡುಗಿಯರನ್ನು ಪದೇ ಪದೇ ಚುಡಾಯಿಸುವುದು, ಇಷ್ಟು ಮಾತ್ರವಲ್ಲದೇ ನಿರಂತರವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡುವುದು, ದಾಖಲೆಗಳನ್ನು ಹೊಂದದೇ ಇರುವ ಬೈಕ್ ಚಾಲಕನಿಗೆ ಭರ್ಜರಿ ದಂಡ ಬಿದ್ದಿದೆ.
ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಾ, ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಈತನ ಕುರಿತು ಗಮನಿಸಿದವರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ನಂತರ ಕಾರ್ಯಾಚರಣೆಗಿಳಿದ ಪೊಲೀಸರು ಯುವಕನ ಬೈಕನ್ನು ತಡೆದು ನಿಲ್ಲಿಸಿ ದಾಖಲೆ ಪರಿಶೀಲನೆ ಮಾಡಿದಾಗ, ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು, ಅಗತ್ಯ ದಾಖಲೆಗಳಿಲ್ಲದಿರುವುದು ತಿಳಿದು ಬಂದಿದೆ.
ನಂತರ ಪೊಲೀಸರು ಪ್ರಿ ವೀಲಿಂಗ್, ಚಾಲನೆ ಸಂದರ್ಭ ಮೊಬೈಲ್ ಬಳಕೆ, ಚಾಲನಾ ಪರವಾನಗಿ ಇಲ್ಲದಿರುವುದು, ಸೈಲೆನ್ಸರ್ ಮಾಡಿಫೈ ಮಾಡಿದಕ್ಕೆ, ನಂಬರ್ ಪ್ಲೇಟ್ ಕ್ರಮಬದ್ಧವಲ್ಲದೇ ಇರುವುದಕ್ಕೆ, ಅಪಾಯಕಾರಿ ಚಾಲನೆಗೆ, ಸಂಚಾರಿ ನಿಯಮ ಉಲ್ಲಂಘನೆ, ಪೊಲೀಸರು ಸಿಗ್ನಲ್ ನೀಡಿದರೂ ತೆರಳಿದ್ದಕ್ಕೆ, ರೇಸಿಗ್‌ನಂತೆ ಅತಿವೇಗದ ಚಾಲನೆ, ಸುಳ್ಳು ಮಾಹಿತಿ ನೀಡಿದ್ದಕ್ಕೆ, ವಾಹನ ವಿಮೆ ಇಲ್ಲದಿರುವುದಕ್ಕೆ, ಹೆಲ್ಮೆಟ್ ಧರಿಸದೇ ಇರುವುದಕ್ಕೆ ಸೇರಿ ಒಟ್ಟು ರೂ.18500 ದಂಡ ವಿಧಿಸಿದ್ದಾರೆ.
ನಂತರ ಆತನಿಂದಲೇ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಆಗಮಸಿ ದಂಡ ಕಟ್ಟಿದ್ದಾರೆ. ಅಲ್ಲದೇ ಮಗನ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಮ್ಮೆ ಈ ರೀತಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಿ ಎಂದು ಪೋಷಕರೇ ಹೇಳಿದ್ದಾರೆ ಎಂದು ಸೋಮವಾರ ಸರ್ಕಲ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.
Comments are closed.