KMF: ಇ-ಕಾಮರ್ಸ್ ಡೆಲಿವರ್ ಆಪ್‌ಗಳಲ್ಲೂ ಸಿಗಲಿದೆ ನಂದಿನಿ ದೋಸೆ, ಇಡ್ಲಿ ಹಿಟ್ಟು!

KMF: ನಂದಿನಿ ಉತ್ಪನ್ನಗಳು ಇತ್ತೀಚೆಗೆ ಉತ್ತರ ಭಾರತಕ್ಕೂ ವಿಸ್ತರಿಸಿ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇದೀಗ ನಂದಿನಿ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ನಂದಿನಿ ಇ-ಕಾಮರ್ಸ್ ಆಫ್‌ಗಳಲ್ಲೂ ಮಾರಾಟ ಮಾಡಲು ಮುಂದಾಗಿದೆ.
ಕೆಎಂಎಫ್ ತನ್ನ ಮಾರಟ ಜಾಲವನ್ನು ವಿಸ್ತರಣೆ ಮಾಡಿದ್ದು, ಇನ್ನು ಮುಂದೆ ನಂದಿನಿ ಉತ್ಪನ್ನಗಳು ಎಲ್ಲಾ ಚಿಲ್ಲರೆ ಮಳಿಗೆ, ಆಪ್‌ಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರವಲ್ಲದೇ ಮಾಲ್‌ಗಳಲ್ಲೂ ಲಭ್ಯವಾಗಲಿದೆ.
ಎ.1 ರಿಂದ ನಂದಿನಿ ಉತ್ಪನ್ನಗಳು ಇ-ಕಾಮರ್ಸ್ ವೇದಿಕೆಯಲ್ಲಿ ಜನರಿಗೆ ಲಭ್ಯವಾಗಲಿದೆ. ಇನ್ನು ಮುಂದೆ ಜನರ ಮನೆ ಬಾಗಿಲಿದೆ ಇಡ್ಲಿ, ದೋಸೆ ಹಿಟ್ಟು ಸೇರಿ ನಂದಿನಿಯ ಹಲವು ಉತ್ಪನ್ನಗಳು ಸ್ವಿಗ್ಗಿ ಇನ್ಸ್ಟಾಮಾರ್ಟ್, ಬ್ಲಿಂಕಿಟ್, ಬಿಗ್‌ಬಾಸ್ಕೆಟ್, ಜೆಪ್ಟೋದಂತಹ ಇ-ಕಾಮರ್ಸ್ ಫ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗಲಿದೆ.
Comments are closed.