of your HTML document.

Bantwal: ಕೇರಳಕ್ಕೆ ಅಕ್ರಮವಾಗಿ ಮರ ಸಾಗಾಟ: ವಾಹನ ವಶ ಪಡೆದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು

Bantwal: ಮಾ. 21 ರಂದು ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಿಂದ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಯವರು ಬಂಟ್ವಾಳದ ಕಡಂಬು ಎಂಬಲ್ಲಿ ಕಾರ್ಯಾಚರಣೆ ಮಾಡಿ ಸ್ವತ್ತು ವಶಕ್ಕೆ ಪಡೆದುಕೊಂಡಿದ್ದಾರೆ..

 

ಬಂಟ್ವಾಳ (Bantwal) ತಾಲೂಕು ವಿಟ್ಲ ಪಡೂರು ಗ್ರಾಮದ ಕಡಂಬು ಎಂಬಲ್ಲಿ ಪುತ್ತೂರು ಕಡೆಯಿಂದ ಮರದ ದಿಮ್ಮಿಗಳನ್ನು ತುಂಬಿಸಿಕೊಂಡು ಕೇರಳಕ್ಕೆ ಸಾಗಾಟ ಮಾಡುವ ವೇಳೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಪತ್ತೆ ಹಚ್ಚಿ ಕೇಸು ದಾಖಲಿಸಿಕೊಂಡಿದ್ದಾರೆ. ಸೊತ್ತು ಮತ್ತು ವಾಹನದ ಮೌಲ್ಯ 3.50 ಲಕ್ಷವಾಗಿದೆ. ಆರೋಪಿ ವಾಹನ ಚಾಲಕ ಅನ್ವ‌ರ್ ಸಾದತ್ ಅಟ್ಟೂರು ಇವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಹಾಜರಾಗಲು ನೋಟಿಸ್‌ ನೀಡಲಾಗಿದೆ.

Comments are closed.