Holy basil: ತುಳಸಿ ಗಿಡಕ್ಕೆ ವ್ಯಕ್ತಿಯಿಂದ ಅವಮಾನ : ಕೇರಳ ಹೈಕೋರ್ಟ್ ಕೊಟ್ಟ ಆದೇಶ ಏನು?

Share the Article

Holy basil: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಪೂಜ್ಯನೀಯ ಸ್ಥಾನ ಇದೆ. ಪ್ರತಿಯೊಬ್ಬ ಹಿಂದೂ(Hindu) ಮನೆಯ ಎದುರಿನಲ್ಲಿ ತುಳಿಸಿ ಗಿಡ(Tulasi plant) ನೆಡಲಾಗುತ್ತದೆ. ಅದಕ್ಕೆ ಸುಂದರವಾದ, ಮನಸ್ಸಿಗೆ ಮುದ ನೀಡುವಂತ ಕಟ್ಟೆಗಳನ್ನು ಕಟ್ಟಿ ನೆಟ್ಟು ಪೂಜಿಸಲಾಗುತ್ತದೆ. ಆರೋಗ್ಯದ(Health) ದೃಷ್ಟಿಯಿಂದಲೂ ತುಳಸಿ ಗಿಡ ಬಹಳ ಉಪಯೋಗವಾದುದ್ದು. ಇಂಥ ಗಿಡಕ್ಕೆ ಅನ್ಯ ಧರ್ಮೀಯ ವ್ಯಕ್ತಿಯೊಬ್ಬ ಅವಮಾನಿಸಿದ್ದಾನೆ. ಆದರೆ ಪೋಲೀಸರು ಏನು ಮಾಡಿದ್ದಾರೆ ನೋಡಿ.

ಹಿಂದೂ ಮನೆಗಳಲ್ಲಿ ತುಳಸಿ ಗಿಡವನ್ನು ಹೊಂದಿರುವ ತುಳಸಿಕಟ್ಟೆಯನ್ನು ಅವಮಾನಿಸಿದ ಆರೋಪ ಹೊತ್ತಿರುವ ಅಬ್ದುಲ್ ಹಕೀಮ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ(Kerala) ಹೈಕೋರ್ಟ್(High court) ಪೊಲೀಸರಿಗೆ ನಿರ್ದೇಶನ ನೀಡಿದೆ. ಹಕೀಮ್ ಗಿಡಕ್ಕೆ ಅವಮಾನ ಮಾಡಿರುವ ವಿಡಿಯೋವನ್ನು(Video) ಅಪ್‌ಲೋಡ್ ಮಾಡಿದ್ದ ವ್ಯಕ್ತಿ ಶ್ರೀರಾಜ್‌ ಆರ್‌ಎ ಎಂಬಾತನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಶ್ರೀರಾಜ್‌ನನ್ನು ಬಂಧಿಸಿದಾಗ ಹಕೀಮ್ ಮೇಲೆ ಪ್ರಕರಣ ದಾಖಲಿಸದೆ ಬಿಡುಗಡೆ ಮಾಡಿದ್ದೇಕೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.

Comments are closed.