Ferrari lovers: 40% ಫೆರಾರಿ ಕಾರು ಖರೀದಿದಾರರು ಯಾರು ಗೊತ್ತಾ? ಕಾರು ಖರೀದಿ ಕನಸೀಗ ಬೇಗನೆ ನನಸು

Share the Article

Ferrari lovers: ಕಾರು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಬ್ರಾಂಡೆಡ್‌ ಐಶಾರಾಮಿ ಕಾರುಗಳು(Luxury car) ಎಂದರೆ ಅದರಲ್ಲೂ ಯುವಕರಿಗೆ(Youths) ಎಲ್ಲಿಲ್ಲದ ಪ್ರೀತಿ. ಹಿಂದೆ ಎಲ್ಲಾ ತಂದೆ ಕಾರು ಕೊಂಡುಕೊಂಡರೆ ಅದೇ ಮಕ್ಕಳಿಗೆ ಖುಷಿ. ಆದರೆ ಈಗ ಹಾಗಲ್ಲ ನವ ತರುಣರು 30 ವರ್ಷದೊಳಗೆ ಕಾರು ಕೊಂಡುಕೊಳ್ಳುವಷ್ಟು ತಾಕತ್ತು ಹೊಂದಿರುತ್ತಾರೆ. ಅದು ದುಬಾರಿ ಕಾರುಗಳನ್ನು. ಅವರ ಕನಸಗಳನ್ನು ಬೇಗನೇ ನನಸಾಗಿಸಿಕೊಳ್ಳುತ್ತಾರೆ.

ಫೆರಾರಿ(Ferrari) ತನ್ನ ಗ್ರಾಹಕರ ನೆಲೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣುತ್ತಿದೆ. ಸಿಇಒ ಬೆನೆಡೆಟ್ಟೊ ವಿಗ್ನಾ(CEO Benedetto Vigna) ಅವರ ಪ್ರಕಾರ, ಸುಮಾರು 40% ಹೊಸ ಖರೀದಿದಾರರು ಈಗ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಅನ್ನೋದೇ ಆಶ್ಚರ್ಯ. ಎರಡು ವರ್ಷಗಳ ಹಿಂದೆ ಕೇವಲ 30% ರಷ್ಟು ಕಡಿಮೆ ಇದ್ದ ಕಾರ್‌ ಕ್ರೇಝ್‌, ಇದೀಗ 40% ಗಮನಾರ್ಹ ಹೆಚ್ಚಳವನ್ನು ಸೂಚಿಸುತ್ತದೆ.

ಸಾಂಪ್ರದಾಯಿಕವಾಗಿ ಹಿರಿಯರು, ದೀರ್ಘಕಾಲದಿಂದ ಕೊಂಡುಕೊಳ್ಳಬೇಕು ಎನ್ನುವ ಉತ್ಸಾಹಿಗಳೊಂದಿಗೆ ಸಂಬಂಧ ಹೊಂದಿರುವ ಫೆರಾರಿಯು, ಇದೀಗ ಯುವ ಪೀಳಿಗೆಯಲ್ಲಿ ಆಕರ್ಷಣೆ ಹೆಚ್ಚುತ್ತಿರುವುದು ಐಷಾರಾಮಿ ಆಟೋಮೋಟಿವ್ ಮಾರುಕಟ್ಟೆಯಲ್ಲಿ(Market) ಬದಲಾಗುತ್ತಿರುವ ಭರವಸೆಯನ್ನು ಸೂಚಿಸುತ್ತದೆ. ಬ್ರ್ಯಾಂಡ್‌ನ ನಾವೀನ್ಯತೆ, ಪ್ರತ್ಯೇಕತೆ ಮತ್ತು ವಿಕಸನಗೊಳ್ಳುತ್ತಿರುವ ವಿನ್ಯಾಸಗಳು ಐಕಾನಿಕ್ ಪ್ರಾನ್ಸಿಂಗ್ ಹಾರ್ಸ್ ಪರಂಪರೆಯ ತುಣುಕನ್ನು ಹೊಂದಲು ಉತ್ಸುಕರಾಗಿರುವ ಶ್ರೀಮಂತ, ಕಿರಿಯ ಖರೀದಿದಾರರ ಹೊಸ ಅಲೆಯನ್ನು ಆಕರ್ಷಿಸುತ್ತಿವೆ.

Comments are closed.