Belthangady: ಕಾಡಿನಲ್ಲಿ ಮೂರು ತಿಂಗಳ ಹೆಣ್ಣು ಮಗು ಪತ್ತೆ!

Belthangady: ಬೆಳಾಲು ಗ್ರಾಮದ ಕೋಡೋಳುಕೆರೆ-ಮುಂಡ್ರೋಟ್ಟು ಬಳಿ ಕಾಡಿನ ಒಳಗೆ ಮೂರು ತಿಂಗಳ ಹೆಣ್ಣು ಮಗುವೊಂದು ಪತ್ತೆಯಾಗಿದೆ. ಈ ಘಟನೆ ಮಾ.22 ರ ಬೆಳಿಗ್ಗೆ 9.15ರ ಹೊತ್ತಿಗೆ ನಡೆದಿದೆ.
ಗುಲಾಬಿ ಎನ್ನುವ ಮಹಿಳೆ ಉಜಿರೆಯಿಂದ ಮಾಯಾದಲ್ಲಿರುವ ತನ್ನ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿ ನೋಡಿದಾಗ ಹೆಣ್ಣು ಮಗು ಕಂಡು ಬಂದಿದೆ. ತಕ್ಷಣ ಬೆಳಾಲು ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಅವರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ವಿದ್ಯಾ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಧರ್ಮಸೃಳ ಆರೋಗ್ಯಾಧಿಕಾರಿ ಮಂಜು ಅವರು ಮಗುವಿನ ಆರೋಗ್ಯ ತಪಾಸಣೆ ಮಾಡಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ವರದಿಯಾಗಿದೆ.
Comments are closed.