Bantwala: ಕಾರಿಂಜೇಶ್ವರ ಬೆಟ್ಟ ಏರಲು ಮುಂದಾದ ಕೋತಿರಾಜ್‌!

Bantwala: ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವ ಸಾಹಸಕ್ಕೆ ಕೋತಿರಾಜ್‌ ಮುಂದಾಗಿದ್ದಾರೆ. ಮಾ.23 ರ ಆದಿತ್ಯವಾರ ಬಂಡೆ ಏರುವುದಾಗಿ ಕೋತಿರಾಜ್‌ ಅವರು ಅಧಿಕೃತವಾಗಿ ಹೇಳಿದ್ದಾರೆ.

ಕರುನಾಡಿನ ಸ್ಪೈಡರ್‌ಮ್ಯಾನ್‌ ಎಂದು ಖ್ಯಾತಿ ಪಡೆದಿರುವ ಕೋತಿರಾಜ್‌ ಅವರು ಬಂಟ್ವಾಳದತ್ತ ಆಗಮಿಸಿ ಬೆಟ್ಟ ಏರುವ ಸಾಹಸಕ್ಕೆ ಮುಂದಾಗಿದ್ದಾರೆ. ಕೋತಿರಾಜ್‌ ಅವರು ಬಡವರ ಕಲ್ಯಾಣಕ್ಕೆಂದು ಟ್ರಸ್ಟ್‌ವೊಂದನ್ನು ನಡೆಸುತ್ತಿದ್ದಾರೆ. ಈ ಮೂಲಕ ಸಮಾಜ ಸೇವೆ ಮಾಡಲು ಆರ್ಥಿಕ ಸಹಾಯ ಧನದ ಅಗತ್ಯತೆ ಇದೆ. ಈ ಕಾರಣದಿಂದ ಬಂಟ್ವಾಳದ ಪುರಾಣ ಪ್ರಸಿದ್ಧ ಕಾರಿಂಜೇಶ್ವರ ದೇವಾಲಯದ ಬೆಟ್ಟವನ್ನು ಹತ್ತಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.

ಕೋತಿ ರಾಜ್‌ ಅವರು ದೇವಸ್ಥಾನ, ಪೂಂಜಾಲಕಟ್ಟೆ ಪೊಲೀಸ್‌ ಠಾಣೆಗೆ ಈ ಕುರಿತು ಅಧಿಕೃತ ಪತ್ರ ನೀಡಿದ್ದಾರೆ.

Comments are closed.