Bank Strike: ಗಮನಿಸಿ, ಮಾ.24,25 ಬ್ಯಾಂಕ್‌ ಮುಷ್ಕರವಿಲ್ಲ!

Share the Article

Bank Strike: ವಾರದಲ್ಲಿ ಐದು ದಿನಗಳ ಕೆಲಸದ ಅವಧಿ ಮತ್ತು ಎಲ್ಲಾ ಕೇಡರ್‌ಗಳಲ್ಲಿ ನೇಮಕಾತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಮಾಡಿ ವಿವಿಧ ಬ್ಯಾಂಕ್‌ ಯೂನಿಯನ್‌ಗಳು ಮಾ.24,25 ರಂದು ಕರೆ ನೀಡಿದ್ದ ರಾಷ್ಟ್ರವ್ಯಾಪ್ತಿ ಬ್ಯಾಂಕ್‌ ಮುಷ್ಕರವನ್ನು ಮುಂದೂಡಲಾಗಿದೆ.

ನೇಮಕಾತಿ, ಪಿಎಲ್‌ಐ ಮತ್ತು ಐದು ದಿನಗಳ ಕೆಲಸ ಸೇರಿ ಇತರ ಬೇಡಿಕೆ ಈಡೇರಿಕೆಗೆ ಯುಎಫ್‌ಬಿಯು ಆಗ್ರಹ ಮಾಡಿತ್ತು. ಇದಕ್ಕೆ ಹಣಕಾಸು ಇಲಾಖೆ, ಭಾರತೀಯ ಬ್ಯಾಂಕುಗಳ ಸಂಘ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಮುಷ್ಕರ ಮುಂದೂಡಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘ ಹೇಳಿರುವ ಕುರಿತು ವರದಿಯಾಗಿದೆ. ಹೀಗಾಗಿ ಮುಂದಿನ ವಾರ ಆರಂಭಕ್ಕೆ ನಡೆಯಬೇಕಿದ್ದ ಮುಷ್ಕರ ರದ್ದಾಗಿದೆ.

Comments are closed.