of your HTML document.

Air India: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೃತದೇಹ ಪತ್ತೆ!!

Air india: ದೆಹಲಿಯಿಂದ ಲಕ್ನೋಗೆ ಬಂದಿಳಿದ ಏರ್ ಇಂಡಿಯಾ (air india) ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಕುಳಿತಲ್ಲೇ ನಿಧನರಾಗಿರುವ ಅಪರೂಪದ ಘಟನೆ ನಡೆದಿದೆ.

 

ಬಿಹಾರದ ಗೋಪಲ್ ಗಂಜ್ ನ ಐವತ್ತೆರಡು ವರ್ಷದ ಆಸಿಫುಲ್ಲಾ ಅನ್ಸಾರಿ ಮೃತ ದುರ್ದೈವಿಯಾಗಿದ್ದಾರೆ. ಬೆಳಿಗ್ಗೆ ಎಂಟು ಹತ್ತಕ್ಕೆ ವಿಮಾನ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು. ಈ ಸಂದರ್ಭ ಈ ವ್ಯಕ್ತಿ ಮಾತ್ರ ಕೆಳಗಿಳಿದಿರಲಿಲ್ಲ.

 

ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಅವರು ಎಚ್ಚರವಾಗಿಲ್ಲ.‌ ಸೀಟ್ ಬೆಲ್ಟ್ ಕೂಡಾ ಬಿಚ್ಚದೆ, ಊಟವನ್ನೂ ಮಾಡಿರಲಿಲ್ಲ. ನಂತರ ವಿಮಾನದಲ್ಲಿದ್ದ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

 

 

Comments are closed.