Noida: ಹಸುವಿನ ಹಾಲು ಕುಡಿದ ಮಹಿಳೆ ಸಾವು!

Noida: ನೊಯ್ಡಾದ ಜೆವಾರ್‌ನಲ್ಲಿ ಒಬ್ಬ ಮಹಿಳೆ ಹಸುವಿನ ಹಾಲು ಕುಡಿದ ನಂತರ ವಾಂತಿ ಮಾಡಲು ಪ್ರಾರಂಭಿಸಿದ್ದು, ಆ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಆಕೆಯ ಪರಿಸ್ಥಿತಿ ಗಂಭೀರವಾಗಿದ್ದನ್ನು ಗಮನಿಸಿ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವಿಗೀಡಾಗಿದ್ದಾಳೆ.
ಮಹಿಳೆ ರೇಬಿಸ್ ಇರುವ ಹಸುವಿನ ಹಾಲು ಕುಡಿದು ಸಾವಿಗೀಡಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಆ ಹಸುವನ್ನು ಹುಚ್ಚು ನಾಯಿ ಕಚ್ಚಿದ್ದು, ಅದರಿಂದಾಗಿ ಆಕೆಗೆ ರೇಬಿಸ್ ರೋಗ ಬಂದಿತ್ತು. ಹಸುವಿನ ಹಾಲಿನ ಮೂಲಕ ರೇಬೀಸ್ ಸೋಂಕು ಮಹಿಳೆಯ ದೇಹಕ್ಕೆ ಹರಡಿದ್ದು, ಅದು ಮಹಿಳೆಯ ಸಾವಿಗೆ ಕಾರಣವಾಯಿತು ಎನ್ನುವ ವಿಷಯ ಬೆಳಕಿಗೆ ಬಂದಿದೆ.
Comments are closed.