of your HTML document.

KJ George: ವಿದ್ಯುತ್‌ ದರ ಏರಿಕೆ ನಿರ್ಧಾರ ರಾಜ್ಯ ಸರಕಾರದ್ದಲ್ಲ- ಕೆಜೆ ಜಾರ್ಜ್‌

KJ George: ವಿದ್ಯುತ್‌ ದರ ಏರಿಕೆ ನಿರ್ಧಾರ ರಾಜ್ಯ ಸರಕಾರದ್ದಲ್ಲ. ಇದು ಹೈಕೋರ್ಟ್‌ ತೀರ್ಪು ಪ್ರಕಾರ ಕೆಇಆರ್ಸಿ ವಿದ್ಯುತ್‌ ದರ ಏರಿಕೆ ಆದೇಶ ನೀಡಿದೆ ಎಂದು ಸಚಿವ ಕೆ.ಜೆ.ಜಾರ್ಜ್‌ ಅವರು ಸ್ಪಷ್ಟನೆ ನೀಡಿದ್ದಾರೆ.

ವಿದ್ಯುತ್‌ ದರ ಏರಿಕೆ ಕುರಿತು ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ರಾಜ್ಯ ಸರಕಾರ ವಿದ್ಯುತ್‌ ದರವನ್ನು ಏರಿಸಿಲ್ಲ. ಪ್ರತಿ ಯೂನಿಟ್‌ಗೆ 36 ಪೈಸೆ ಏರಿಕೆ ಆಗಿರುವುದು ವಿದ್ಯುತ್‌ ದರದ ಏರಿಕೆಯಲ್ಲ. ಬದಲಿಗೆ ವಿದ್ಯುತ್‌ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಣಿ. ಗ್ರಾಚ್ಯುಟಿ ಹಣದ ಪಾಲನ್ನು ಗ್ರಾಹಕರಿಂದ ಪಡೆಯಬಹುದು ಎಂಬ ಹೈಕೋರ್ಟ್‌ ಆದೇಶದ ಮೇರೆ ಕೆಇಆರ್‌ಸಿ ಈ ಆದೇಶ ಹೊರಡಿಸಿದೆ. ಈ ಕುರಿತಂತೆ 2025-26ರ ಹಣಕಾಸು ವರ್ಷದಲ್ಲಿ ಪ್ರತಿ ಯೂನಿಟ್‌ಗೆ 36 ಪೈಸೆಯನ್ನು ಏರಿಸಿದೆ ಎಂದರು.

Comments are closed.