Kerala: ಬ್ಯಾಂಕ್‌ಗೆ ನುಗ್ಗಿ ಪತ್ನಿಗೆ ಮಚ್ಚಿನಿಂದ ಹಲ್ಲೆ ಮಾಡಿದ ಪತಿ!

Kerala: ಬ್ಯಾಂಕ್ ಉದ್ಯೋಗಿಯಾಗಿರುವ ತನ್ನ ಪತ್ನಿಯನ್ನು ಕೊಲೆ ಮಾಡುವ ಯತ್ನ ಮಾಡಿದ ಘಟನೆ ಕೇರಳದ ತಳಿಪರಂಬದಲ್ಲಿ ನಡೆದಿದೆ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ಪತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಎಸ್‌ಬಿಐ ಪೂವಂ ಶಾಖೆಯ ಕ್ಯಾಷಿಯರ್ ಆಗಿರುವ ಅನುಪಮಾ (39) ಅಲಕೋಡ್ ಅರಂಗಂ ನಿವಾಸಿ. ಅನುಪಮಾ ಅವರು ತಳಿಪರಂಬ ಸಹಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪತ್ನಿಗೆ ಹಲ್ಲೆ ಮಾಡಲೆತ್ನಿಸಿದ ಪತಿ ಅನುರೂಪ್ (41) ಈತ ಕಾರ್ ಶೋ ರೂಂ ಮಾರಾಟ ಅಧಿಕಾರಿ. ಈತನನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಟುಂಬ ಕಲಹದಿಂದ ಈ ದಾಳಿ ನಡೆದಿದೆ ಎನ್ನಲಾಗಿದೆ.
ಘಟನೆ ವಿವರ:
ಗುರುವಾರ ಮಧ್ಯಾಹ್ನ 3.10 ರ ಸುಮಾರಿಗೆ ಬ್ಯಾಂಕ್‌ಗೆ ಬಂದ ಅನೂಪ್, ಅನುಪಮಾ ಅವರನ್ನು ಮಾತನಾಡಲೆಂದು ಹೊರಗಡೆ ಕರೆದಿದ್ದಾನೆ. ಹೊರಗೆ ಬಂದ ಅನುಪಮಾ ಜೊತೆ ಮಾತನಾಡುತ್ತಿರುವಾಗ ಕೋಪಗೊಂಡ ಆತ ಮಚ್ಚು ತೆಗೆದು ಅವಳ ಮೇಲೆ ಹಿಂದಿನಿಂದ ದಾಳಿ ಮಾಡಿದ್ದಾನೆ. ಕೂಡಲೇ ಅನುಪಮಾ ಬ್ಯಾಂಕ್ ಒಳಗೆ ಸುರಕ್ಷತೆಗೆಂದು ಓಡಿದ್ದಾರೆ. ಆಕೆಯನ್ನು ಮತ್ತೆ ಹಿಂಬಾಲಿಸಿಕೊಂಡು ಬಂದು ಮತ್ತೆ ಹೊಡೆಯಲು ಯತ್ನ ಮಾಡಿದ್ದಾನೆ.
Comments are closed.