Karnataka Minister MLAs Salary: ಕರ್ನಾಟಕ ಸಿಎಂ, ಸಚಿವರು, ಶಾಸಕರ ವೇತನ ಶೇ.100 ರಷ್ಟು ಹೆಚ್ಚಾಗಲಿದೆ!

Karnataka Minister MLAs Salary: ಕರ್ನಾಟಕ ಸರಕಾರವು ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನವನ್ನು ಶೇ.100 ರಷ್ಟು ಹೆಚ್ಚಿಸಲು ಮುಂದಾಗಿದೆ. ಈ ಪ್ರಸ್ತಾವಕ್ಕೆ ರಾಜ್ಯಪಾಲರಿಂದ ಅನುಮತಿ ದೊರಕಿದೆ.
ಸಿಎಂ ವೇತನ ತಿಂಗಳಿಗೆ 1.5ಲಕ್ಷ ರೂ.ಗೆ ಏರಿಕೆಯಾಗಲಿದ್ದು, ಇದು ಶೇ.100 ರ ಹೆಚ್ಚಳವಾಗಿರಲಿದೆ. ಸಚಿವರ ವೇತನ 1.25 ಲಕ್ಷ ರೂ.ಗೆ ಏರಿಕೆಯಾಗಲಿದೆ. ಶಾಸಕರು ಹಾಗೂ ವಿಪಕ್ಷ ನಾಯಕರ ವೇತನ 80 ಸಾವಿರ ರೂ. ಏರಿಕೆಯಾಗಿದೆ. ಸಚಿವರ ಮನೆ ಬಾಡಿಗೆ ಭತ್ಯೆ 2.50 ಲಕ್ಷ ರೂ.ಗೆ ಹೆಚ್ಚಾಗಲಿದೆ.
ಶಾಸಕರ ವೇತನ 40 ಸಾವಿರ ರೂ.ನಿಂದ 80 ಸಾವಿರ ರೂ.ಗೆ ಹೆಚ್ಚಳವಾಗಲಿದೆ. ಜೊತೆಗೆ ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್ ಸಭಾಪತಿ ವೇತನ 75 ಸಾವಿರ ರೂ. ನಿಂದ 1.25 ಲಕ್ಷ ರೂ, ಸಿಎಂ ವೇತನ 75 ಸಾವಿರ ರೂ. ನಿಂದ 1.50 ಲಕ್ಷ ರೂ., ಸಚಿವರ ವೇತನ 60 ಸಾವಿರ ರೂ. ನಿಂದ 1.25 ಲಕ್ಷ ರೂ.ವರೆಗೆ ಹೆಚ್ಚಳವಾಗಲಿದೆ.
Comments are closed.